ಭಾರತ, ಮಾರ್ಚ್ 24 -- ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ಗೆಲುವು ಸಾಧಿಸಿದೆ. ಆದರೂ, ಸಿಎಸ್‌ಕೆ ಫ್ಯಾನ್ಸ್‌ ಮಾತ್ರ ಖುಷಿ ಪಟ್ಟ ಹಾಗಿಲ್ಲ. ಧೋನಿ ಸಿಕ್ಸರ್‌ ಬಾರಿಸಿ ಪಂದ್ಯ ಫಿನಿಶ್‌ ಮಾಡ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳು, ರಚಿನ್‌ ರವೀಂದ್ರ ಪಂದ್ಯ ಫಿನಿಶ್‌ ಮಾಡಿದ್ದನ್ನು ನೋಡಿ ಅಸಮಾಧಾನಗೊಂಡಿರುವಂತಿದೆ. ಸಿಎಸ್‌ಕೆ ತಂಡದ ಗೆಲುವಿಗೆ 4 ರನ್‌ಗಳ ಅಗತ್ಯವಿದ್ದಾಗ ಎಂಎಸ್ ಧೋನಿ ಕ್ರೀಸ್‌ಗೆ ಬಂದರು. ಆವರೆಗೂ ರವೀಂದ್ರ ಜಡೇಜಾ ಆಡುತ್ತಿದ್ದರು. ಜಡೇಜಾ ಔಟಾಗುತ್ತಿದ್ದಂತೆಯೇ ಚೆಪಾಕ್‌ ಮೈದಾನದಲ್ಲಿ ಸೇರಿದ್ದ ಫ್ಯಾನ್ಸ್‌ ಸಂಭ್ರಮ ಇಮ್ಮಡಿಯಾಯ್ತು. ಕಾರಣ ಧೋನಿ ಕಣಕ್ಕಿಳಿಯುತ್ತಾರೆ ಎಂದು. ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಸೇರಿದ್ದ ಅಭಿಮಾನಿಗಳು ಮಾತ್ರವಲ್ಲದೆ, ಟಿವಿ ಹಾಗೂ ಮೊಬೈಲ್‌ ಹಿಡಿದು ಪಂದ್ಯ ನೋಡುತ್ತಿದ್ದವರು ಕೂಡಾ ಧೋನಿ ಆಟಕ್ಕೆ ಕಾಯುತ್ತಿದ್ದರು.

ಪಂದ್ಯದಲ್ಲಿ ಧೋನಿ ಸಿಕ್ಸರ್‌ ಬಾರಿಸಿ ಪಂದ್ಯ ಫಿನಿಶ್‌ ಮಾಡಬೇಕು ಎಂಬುದು ಅಭಿಮಾನಿಗಳ ಇರಾದೆಯಾಗಿತ್ತು. ಆದರೆ,...