ಭಾರತ, ಏಪ್ರಿಲ್ 15 -- ಇಂಡಿಯನ್ ಪ್ರೀಮಿಯರ್ ಲೀಗ್​ ಆರಂಭಿಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದು ಅಭಿಯಾನ ಆರಂಭಿಸಿದ ಬಳಿಕ ಸತತ 5 ಪಂದ್ಯಗಳಲ್ಲಿ ಸೋಲನುಭವಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್, ಇದೀಗ ಗೆದ್ದು ಸೋಲಿನ ಸರಪಳಿ ಕಳಚಿದೆ. ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 5 ವಿಕೆಟ್​ಗಳ ಗೆಲುವು ದಾಖಲಿಸಿದೆ. ಎಂಎಸ್ ಧೋನಿ ಅವರ ಸ್ಫೋಟಕ ಆಟದಿಂದ 18ನೇ ಆವೃತ್ತಿಯಲ್ಲಿ ಚೆನ್ನೈ 2ನೇ ಜಯದ ನಗೆ ಬೀರಿದೆ. ಗೆದ್ದಿದ್ದರ ನಡುವೆಯೂ ಸಿಎಸ್​ಕೆ ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಸಿಲುಕಿದೆ. ಪಂದ್ಯದಲ್ಲಿ ನಡೆದ ಕೆಲವು ಘಟನೆಗಳೂ ಇದಕ್ಕೆ ಪುಷ್ಠಿ ನೀಡುತ್ತಿವೆ.

ಪಂದ್ಯಕ್ಕೂ ಮುನ್ನ ಟಾಸ್​ ಅವಧಿಯಲ್ಲಿ ರಿಷಭ್ ಪಂತ್ ಜೊತೆಗೆ ಆತ್ಮೀಯವಾಗಿ ಮಾತನಾಡಿದ ಧೋನಿ, ಕಾಯಿನ್ ಚಿಮ್ಮಿದ ವೇಳೆ ತನ್ನ ನಿರ್ಧಾರ ಏನೆಂದು ಮ್ಯಾಚ್ ರೆಫ್ರಿಯ ಕಿವಿಯಲ್ಲಿ ಹೇಳಿದರು. ಇದು ಸಂಶಯಾಸ್ಪದಕ್ಕೆ ಕಾರಣವಾಯಿತು. ಕಾಯಿನ್ ಚಿಮ್ಮಿದ ಬೆನ್ನಲ್ಲೇ ನಿರೂಪಕರು ಧೋನಿ ಟೇಲ್ಸ್ ಹೇಳಿದ್ದು ಅಲ್ವಾ ಎಂದು ಕೇಳುತ್ತಾ...