ಭಾರತ, ಏಪ್ರಿಲ್ 21 -- ಇಂಡಿಯನ್ ಪ್ರೀಮಿಯರ್ ಲೀಗ್ 38ನೇ ಪಂದ್ಯದಲ್ಲಿ ಮುಂಬೈನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧ 9 ವಿಕೆಟ್​ಗಳ ಸೋಲಿನ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು ಅವರು ಚೆನ್ನೈ ಸೂಪರ್ ಕಿಂಗ್ಸ್​ ತಂಡವನ್ನು ಟೀಕಿಸಿದ್ದಾರೆ. ಪ್ಲೇಆಫ್​​ಗೆ ಪ್ರವೇಶಿಸುವ ಅವಕಾಶ ಸಿಎಸ್​ಕೆ ಕಳೆದುಕೊಂಡಿರಬಹುದು ಎಂದು ರಾಯುಡು ಅಭಿಪ್ರಾಯಪಟ್ಟಿದ್ದಾರೆ.

ಋತುರಾಜ್ ಗಾಯಕ್ವಾಡ್ ನಾಯಕತ್ವದಲ್ಲಿ ಸಿಎಸ್​ಕೆ 5 ಪಂದ್ಯಗಳಲ್ಲಿ ಕೇವಲ 1 ಗೆಲುವು, 4 ಸೋಲು ಕಂಡಿತ್ತು. ಇಂಜುರಿಯಿಂದ ಗಾಯಕ್ವಾಡ್ ಹೊರಬಿದ್ದ ಹಿನ್ನೆಲೆ ಎಂಎಸ್ ಧೋನಿ ಮತ್ತೆ ನಾಯಕನಾಗಿ ನೇಮಕಗೊಂಡರು. ಹೀಗಾಗಿ ಸಿಎಸ್​ಕೆಗೆ ಗೆಲುವಿನ ಟ್ರ್ಯಾಕ್​​ಗೆ ಮರಳುವ ವಿಶ್ವಾಸ ಹೊಂದಿತ್ತು. ಆದರೆ ಅವರು ನಾಯಕನಾಗಿ ಮರಳಿದ ಪಂದ್ಯದಲ್ಲೇ ಸಿಎಸ್​ಕೆ ಮುಗ್ಗರಿಸಿತ್ತು. ಆದರೆ ಮರು ಪಂದ್ಯದಲ್ಲೇ ಕಂಬ್ಯಾಕ್ ಮಾಡಿದರು.

ಸತತ ಐದು ಸೋಲುಗಳ ನಂತರ ಧೋನಿ ನಾಯಕತ್ವದ ಸಿಎಸ್‌ಕೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿತ್ತು. ಇದರೊಂ...