नई दिल्ली, ಏಪ್ರಿಲ್ 11 -- ನಿಮಗೆ ನೆನಪಿರಬಹುದು, 2024ರ ಐಪಿಎಲ್ ಆರಂಭಕ್ಕೂ ಮುನ್ನ ಎಲ್ಲಾ ತಂಡಗಳ ನಾಯಕರು ಫೋಟೋ ಸೆಷನ್​ಗೆ ಬಂದಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ನಾಯಕನನ್ನು ನೋಡಿ ಎಲ್ಲರೂ ಆಶ್ಚರ್ಯಚಕಿತರಾಗಿದ್ದರು. ಹೌದು, ಅವತ್ತು ಫೋಟೋ ಸೆಷನ್​ಗೆ ಎಂಎಸ್ ಧೋನಿ ಬಂದಿರಲಿಲ್ಲ, ಬದಲಿಗೆ ಋತುರಾಜ್ ಗಾಯಕ್ವಾಡ್ ಆಗಮಿಸಿದ್ದರು. ಸಿಎಸ್​ಕೆಗೆ ಐದು ಟ್ರೋಫಿ ಗೆದ್ದುಕೊಟ್ಟಿದ್ದ ಎಂಎಸ್ ಧೋನಿ ನಾಯಕತ್ವ ಹಸ್ತಾಂತರಿಸಿ ಹಿಂದಿನ ಸೀಟಿಗೆ ಹೋಗಿದ್ದರು. ಆ ದೃಶ್ಯಗಳು ಈಗಲೂ ನೆನಪಿವೆ. ಇನ್ಮುಂದೆ ಧೋನಿ ಕ್ಯಾಪ್ಟನ್ ಆಗಲ್ಲ ಎನ್ನುವ ಸುದ್ದಿ ಅಭಿಮಾನಿಗಳನ್ನು ಸಿಕ್ಕಾಪಟ್ಟೆ ಕಾಡಿತ್ತು!

ಇದೀಗ ಒಂದು ವರ್ಷದ ನಂತರ ಅಭಿಮಾನಿಗಳಿಗೆ ಶುಭ ಸುದ್ದಿ ಸಿಕ್ಕಿದ್ದು, ಧೋನಿ ಮತ್ತೆ ಚೆನ್ನೈ ನಾಯಕತ್ವ ವಹಿಸಿದ್ದಾರೆ. ಹೌದು, ಗುರುವಾರ (ಏಪ್ರಿಲ್ 10) ಸಂಜೆ ಸಿಎಸ್​ಕೆ ಅಧಿಕೃತವಾಗಿ ಘೋಷಣೆ ಮಾಡಿದೆ. ಗಾಯದ ಸಮಸ್ಯೆಯಿಂದ ಋತುರಾಜ್ ಗಾಯಕ್ವಾಡ್ ಐಪಿಎಲ್​ನಿಂದ ಹೊರಬಿದ್ದಿದ್ದು, ಅವರ ಸ್ಥಾನಕ್ಕೆ ಎಂಎಸ್ ಧೋನಿ ಅವರನ್ನೇ ಮತ್ತೆ ನೇಮಿಸಿದೆ. ಮತ್ತೊಮ್...