ಭಾರತ, ಏಪ್ರಿಲ್ 23 -- ಭಾರತದಲ್ಲಿ ಆಟೊಮೊಬೈಲ್‌ ಕ್ಷೇತ್ರ ದಿನೇ ದಿನೇ ಬೆಳೆಯುತ್ತಿದೆ. ಕಂಪನಿಗಳು ಸಾಂಪ್ರದಾಯಿಕ ಇಂಧನಗಳಾದ ಪೆಟ್ರೋಲ್‌, ಡೀಸಲ್‌ ವಾಹನಗಳ ತಯಾರಿಕೆಯ ಬದಲಿಗೆ ಸಿಎನ್‌ಜಿ, ಇವಿ ವಾಹನಗಳನ್ನು ತಯಾರಿಸುತ್ತಿವೆ. ಭಾರತ ಸರ್ಕಾರವೂ ಸುಸ್ಥಿರ ಇಂಧನಗಳ ಬಳಕೆಗೆ ಉತ್ತೇಜನ ನೀಡುತ್ತಿದೆ. ಎಲೆಕ್ಟ್ರಿಕಲ್‌ ವಾಹನಗಳ ವಿಭಾಗವು ದಿನೇ ದಿನೇ ಬೆಳೆಯುತ್ತಿರುವುದನ್ನು ನಾವು ಕಾಣಬಹುದು. ಆದರೆ ಕಾರುಗಳಲ್ಲಿ ಸಿಎನ್‌ಜಿ ಆಧಾರಿತ ಎಂಜಿನ್‌ಗಳು ಬದಲೀ ವ್ಯವಸ್ಥೆಗೆ ಉತ್ತಮವಾಗಿದೆ. ಇದು ಪೆಟ್ರೋಲ್‌, ಡೀಸಲ್‌ನಷ್ಟೇ ಗುಣಮಟ್ಟದ ಕಾರ್ಯಕ್ಷಮತೆಯನ್ನು ನೀಡುತ್ತದೆ. ಭಾರತದಲ್ಲಿ ಖರೀದಿಸಬಹುದಾದ ಉತ್ತಮ ಸಿಎನ್‌ಜಿ ಕಾರುಗಳ ಪರಿಚಯ ನೀಡಲಾಗಿದೆ. ಇವು ಎಲ್ಲಾ ವೈಶಿಷ್ಟ್ಯಗಳನ್ನು ಮತ್ತು ಉತ್ತಮ ಮೈಲೇಜ್‌ ನೀಡುವ 10 ಲಕ್ಷದ ಒಳಗೆ ಖರೀದಿಸಬಹುದಾದ ಬೆಸ್ಟ್‌ ಸಿಎನ್‌ಜಿ ಕಾರುಗಳಾಗಿವೆ.

ಸಬ್‌ ಕ್ಯಾಂಪ್ಯಾಕ್ಟ್‌ ಎಸ್‌ಯುವಿ ಕಾರಾದ ಟಾಟಾ ಪಂಚ್‌ನ ಸಿಎನ್‌ಜಿ 2 ರೂಪಾಂತರಗಳಲ್ಲಿ ಲಭ್ಯವಿದೆ. ಪಂಚ್‌ ಅಡ್ವೆಂಚರ್‌ iCNG ಮತ್ತು ಪಂಚ್‌ ಅಡ್ವೆಂಚರ್‌...