ಭಾರತ, ಜೂನ್ 13 -- ಬೆಂಗಳೂರು: ಜಾತಿ ಗಣತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಕೂಸು. ಈ ಯೋಜನೆ ಜಾರಿ ಮೂಲಕ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಕಲ್ಯಾಣದ ವೇಗ ಹೆಚ್ಚಿಸಬೇಕು ಎನ್ನುವ ಅವರ ಆಸೆ ಕಮರಿ ಹೋಗಿದೆ. 2015ರಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ (ಜಾತಿಗಣತಿ) ನಡೆಸಿದ್ದರು. ಕಾಕತಾಳಿಯ ಎಂಬಂತೆ ಈ ವರದಿಯನ್ನು ಅಂಗೀಕರಿಸಿ ಜಾರಿಗೊಳಿಸುವ ಅವಕಾಶವೂ ಅವರ ಪಾಲಿಗೆ ಒದಗಿ ಬಂದಿತ್ತು. ಆದರೆ ನಾಲ್ಕು ದಿನಗಳ ಹಿಂದೆಯಷ್ಟೇ ಅವರ ಕನಸಿನ ಬೆಲೂನ್‌ ಗೆ ಸೂಜಿ ಚುಚ್ಚಿದ ಅನುಭವವಾಗಿದೆ.

2015 ರಲ್ಲಿ ಸಿದ್ದರಾಮಯ್ಯ ಅವರು 165 ಕೋಟಿ ರೂ.ಗಳ ವೆಚ್ಚದಲ್ಲಿ ಹಿಂದುಳಿದ ವರ್ಗಗಳ ಆಯೋದಗದ ಮೂಲಕ ಈ ಸಮೀಕ್ಷೆಯನ್ನು ನಡೆಸಿದ್ದರು.ಕಳೆದ ಗುರುವಾರ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿಯನ್ನು ಸರ್ಕಾರ ಒಪ್ಪಿಕೊಂಡಿರುವುದಾಗಿಯೂ ಅವರು ಘೋಷಿಸಿ ಹಿಂದುಳಿದ ವರ್ಗಗಳ ಮೀಲಾತಿಯನ್ನು ಶೇ.32 ರಿಂದ ಶೇ.51ಕ್ಕೆ ಹೆಚ್ಚಿಸುವ ಮಹತ್ವದ ನಿರ್ಧಾರವನ್ನೂ ಕೈಗೊಂಡಿದ್ದರು. ಆದರೆ ಪಕ್ಷದ ಹೈಕಮಾಂಡ್‌ ನಿರ್ದೇಶನದಂತೆ ಹೊಸ ಸಮ...