Mysuru, ಮಾರ್ಚ್ 31 -- ಮೈಸೂರು: ಶತಮಾನದ ಹಿನ್ನೆಲೆ ಇರುವ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರವು ಜನರ ಬೇಡಿಕೆಗೆ ಅನುಗುಣವಾಗಿ ನಿವೇಶನ ಹಂಚಿಕೆ ಮಾಡಲು ಹೆಣಗಾಡುತ್ತಿದೆ. ಕಳೆದ ವರ್ಷವಂತೂ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರಿಗೆ ಬದಲಿ ನಿವೇಶನ ನೀಡುವ ವಿಚಾರದಲ್ಲಿ ಭಾರೀ ವಿವಾದಕ್ಕೆ ಗುರಿಯಾಗಿತ್ತು. ವಿಚಾರಣೆಗಳ ನೆಪದಲ್ಲಿ ಬಹುತೇಕ ಅಭಿವೃದ್ದಿಯೇ ಕುಂಠಿತಗೊಂಡಿತ್ತು. ಇದರ ನಡುವೆಯೇ ಮುಂದಿನ ಸಾಲಿನ ಬಜೆಟ್‌ ಅನ್ನು ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ ಮಂಡಿಸಿದ್ದು. ಪಂಚತಾರಾ ಹೊಟೇಲ್‌ ನಿರ್ಮಾಣ, ಶಾಪಿಂಗ್‌ ಕಾಂಪ್ಲೆಕ್ಸ್‌ ನಿರ್ಮಿಸುವ ಗುರಿಯನ್ನು ಇಟ್ಟುಕೊಂಡಿದೆ. ಹೊಸ ಬಡಾವಣೆಗೂ ಯೋಜನೆ ಹಾಕಿಕೊಂಡಿದೆ. ಪ್ರಮುಖ ಯೋಜನೆಗಳ ಪಟ್ಟಿ ಇಲ್ಲಿದೆ.

1. ಮೈಸೂರು - ನಂಜನಗೂಡು ಸ್ಥಳೀಯ ಯೋಜನಾ ಅಭಿವೃದ್ಧಿ ಪ್ರದೇಶದ ವ್ಯಾಪ್ತಿಯಲ್ಲಿ ರೈತರಿಂದ ನೇರವಾಗಿ ಖರೀದಿಸಿ ವಸತಿ ಬಡಾವಣೆ ರಚಿಸುವ ಉದ್ದೇಶಕ್ಕಾಗಿ 2025-26ನೇ ಸಾಲಿನ ಆಯವ್ಯಯದಲ್ಲಿ ರೂ.100.00 ಕೋಟಿಗಳನ್ನು ಕಾಯ್ದಿರಿಸಲಾಗಿದೆ.

2. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ...