ಭಾರತ, ಮಾರ್ಚ್ 4 -- ಸಿಂಹ ರಾಶಿಯ ಯುಗಾದಿ ವರ್ಷ ಭವಿಷ್ಯ: ನೀವು ಮಖ ನಕ್ಷತ್ರದ 1, 2, 3 ಮತ್ತು 4ನೇ ಪಾದಗಳು, ಪುಬ್ಬ ನಕ್ಷತ್ರದ 1, 2, 3 ಮತ್ತು 4ನೇ ಪಾದಗಳು, ಉತ್ತರ ನಕ್ಷತ್ರದ 1ನೇ ಪಾದದಲ್ಲಿ ಜನಿಸಿದ್ದಲ್ಲಿ ನಿಮ್ಮದು ಸಿಂಹ ರಾಶಿ ಆಗುತ್ತದೆ. ನಿಮ್ಮ ಹೆಸರಿನ ಮೊದಲ ಅಕ್ಷರವು ಮ, ಮಿ, ಮು ಮತ್ತು ಮೆ ಆದಲ್ಲಿ ಮಖ ನಕ್ಷತ್ರ. ಮೊ, ಟ, ಟಿ ಮತ್ತು ಟು ಆದಲ್ಲಿ ಪುಬ್ಬ ನಕ್ಷತ್ರ ಮತ್ತು ಟೆ ಆದಲ್ಲಿ ಉತ್ತರ ನಕ್ಷತ್ರದೊಂದಿಗೆ ಸಿಂಹ ರಾಶಿ ಆಗುತ್ತದೆ.

ಹೆಸರೇ ಸೂಚಿಸುವಂತೆ 'ಸಿಂಹ' ಈ ರಾಶಿಯ ಚಿಹ್ನೆ. ಸೂರ್ಯ ಈ ರಾಶಿಯ ಅಧಿಪತಿ ಗ್ರಹ. ಹೊರಗಿನಿಂದ ಕಠಿಣವಾಗಿರುವಂತೆ ಕಾಣಿಸಿಕೊಂಡರೂ ಆಂತರ್ಯದಲ್ಲಿ ಇವರ ಮನಸ್ಸು ಮೃದು. ಯಾವುದೇ ಬಗೆಯ ಕೆಲಸವಿದ್ದರೂ ಸರಿ, ಪರಿಪೂರ್ಣವಾಗಿರಬೇಕು ಎಂದು ಬಯಸುತ್ತಾರೆ. ಹತ್ತಿರದವರಿಂದ ಮೋಸ ಹೋದರೆ ಸುಲಭವಾಗಿ ಮರೆಯುವುದಿಲ್ಲ, ಸಂಬಂಧ ಸರಿಪಡಿಸಿಕೊಳ್ಳಲು ಹೆಚ್ಚು ಅವಕಾಶಗಳನ್ನೂ ಕೊಡುವುದಿಲ್ಲ. ಆದರೆ ಒಲಿದರೆ, ಇವರೊಂದಿಗೆ ಆಪ್ತ ವಲಯಕ್ಕೆ ಸೇರಿದರೆ ತಮ್ಮವರು ಎನಿಸಿಕೊಂಡವರನ್ನು ಎಂದಿಗೂ ಕೈಬಿಡುವುದಿಲ...