Bengaluru, ಜೂನ್ 10 -- ಸಿಂಹ ರಾಶಿಯಲ್ಲಿ ಕುಜ ಮತ್ತು ಕೇತುವಿನ ಸಂಯೋಗವು ಜೂನ್ 6 ರಿಂದ ಜುಲೈ ತಿಂಗಳ 28 ರವರೆಗು ಇರಲಿದೆ. ನಾಡಿ ಜೋತಿಷ್ಯದ ಪ್ರಕಾರ ಜನ್ಮಕುಂಡಲಿಯಲ್ಲಿ ಕುಜ ಮತ್ತು ಕೇತುವಿನ ಯುತಿ ಇದ್ದಲ್ಲಿ ಅದನ್ನು ಕುಜದೋಷ ಎಂದು ಪರಿಗಣಿಸುತ್ತೇವೆ. ಈ ಅವಧಿಯಲ್ಲಿ ಪತಿಯೊಂದು ರಾಶಿಗಳಿಗೂ ವಿಭಿನ್ನವಾದ ಫಲಗಳು ದೊರೆಯುತ್ತವೆ. ಈ ಅವಧಿಯಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಅಥವಾ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ಪೂಜೆಯಿಂದ ಶುಭಫಲಗಳು ದೊರೆಯುತ್ತವೆ. ಕಿರಿ ಸೋದರಿ ಅಥವಾ ಕಿರಿ ಸೋದರನ ಜೊತೆಯಲ್ಲಿ ಅನಾವಶ್ಯಕ ವಾದ ವಿವಾದಗಳು ಉಂಟಾಗುವ ಸಾಧ್ಯತೆಗಳಿವೆ. ಮನೆತನದ ಭೂ ವಿವಾದವೂ ಅಂತಿಮ ಹಂತವನ್ನು ತಲುಪುತ್ತದೆ. ಆದ್ದರಿಂದ ಶಾಂತಿ ಸಹನೆಯಿಂದ ವರ್ತಿಸಿದಷ್ಟೂ ಶುಭಫಲಗಳನ್ನು ಪಡೆಯುವ ಸಾದ್ಯತೆಗಳು ಇರುತ್ತವೆ. ಸಿಂಹ ರಾಶಿಯಲ್ಲಿ ಕುಜ-ಕೇತು ಸಂಯೋಗದಿಂದ ಧನು, ಮಕರ, ಕುಂಭ ಹಾಗೂ ಮೀನ ರಾಶಿಯವರಿಗೆ ಏನೆಲ್ಲಾ ಶುಭಫಲಗಳಿವೆ.

ಸದಾ ಗಡಿಬಿಡಿಯಿಂದ ವರ್ತಿಸುವ ಕಾರಣ ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಯಶಸ್ಸು ದೊರೆಯುವುದಿಲ್ಲ. ಒಮ್ಮೆ ತೆ...