Bengaluru, ಏಪ್ರಿಲ್ 30 -- ಭಾರತದಲ್ಲಿ ಪ್ರಮುಖ ದೇವಾಲಯಗಳನ್ನು ಹೊಂದಿರುವ ರಾಜ್ಯಗಳಲ್ಲಿ ಒಂದಾಗಿರುವ ಆಂಧ್ರ ಪ್ರದೇಶದಲ್ಲಿ ಬರೋಬ್ಬರಿ 32 ನರಸಿಂಹಸ್ವಾಮಿ ದೇವಾಲಯಗಳಿವೆ. ಆದರೆ ಈ ಪೈಕಿ ವಿಶಾಖಪಟ್ಟಣ ಜಿಲ್ಲೆಯ ಸಿಂಹಾಚಲದಲ್ಲಿರುವ ವರಾಹ ಲಕ್ಷ್ಮಿ ನರಸಿಂಹ ದೇವಾಲಯವು ತುಂಬಾ ಜನಪ್ರಿಯವಾಗಿದೆ. ಈ ದೇವಾಲಯ ವಿಷ್ಣುವಿಗೆ ಸಮರ್ಪಿತವಾಗಿದ್ದು, ವರಾಹ ನರಸಿಂಹ ಎಂಬ ಹೆಸರಿನಲ್ಲಿ ಇಲ್ಲಿ ಪೂಜೆಗಳು ನಡೆಯುತ್ತವೆ. ಇದನ್ನು ಸಿಂಹಾಚಲಂ ದೇವಾಲಯ ಅಂತಲೇ ಕರೆಯಲಾಗುತ್ತದೆ. ಈ ಪ್ರಮುಖ ಧಾರ್ಮಿಕ ಕ್ಷೇತ್ರವು ಪೂರ್ವ ಘಟ್ಟಗಳ ಪಶ್ಚಿಮ ಭಾಗದಲ್ಲಿ ನೆಲೆಸಿದ್ದು, ಕೈಲಾಸ ಬೆಟ್ಟ ಅಂತಲೂ ಕರೆಯಲ್ಪಡುತ್ತದೆ. ಸಿಂಹಾಚಲಂ ಎಂಬ ಪದದ ಅರ್ಥ ಸಿಂಹದ ಬೆಟ್ಟ ಎಂದು ಹೇಳಲಾಗುತ್ತದೆ.

ದೇವಾಲಯದ ಇತಿಹಾಸವನ್ನು ನೋಡುವುದಾದರೆ, ಶಾಸನಗಳ ಪ್ರಕಾರ, ದೇವಾಲಯವು ಚಾಲುಕ್ಯ ಚೋಳ ದೊರೆ ಕುಲೋತ್ತುಂಗ-1 ಕ್ರಿ.ಶ 1098ಕ್ಕೂ ಹಿಂದಿನದು. ಗಂಗಾ ರಾಜವಂಶದ ದೊರೆ ನರಸಿಂಹ ದೇವರು 13ನೇ ಶತಮಾನದಲ್ಲಿ ದೇವಾಲಯವನ್ನು ಸಂಪೂರ್ಣವಾಗಿ ನವೀಕರಿಸಿದ್ದಾನೆ ಎಂದು ದಾಖಲೆಗಳು ಹೇಳ...