ಭಾರತ, ಮೇ 7 -- ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಕಾರವಾಗಿ ಭಾರತದ ಸೇನೆ ಪಾಕಿಸ್ತಾನದ ಮೇಲೆ ದಾಳಿ ನಡೆಸಿದೆ. ಈ ದಾಳಿಗೆ 'Operation Sindoor' ಎನ್ನುವ ಹೆಸರಿಡಲಾಗಿದೆ. ಕನ್ನಡದಲ್ಲಿ ಮಾಧ್ಯಮಗಳು 'ಸಿಂಧೂರ' ಎಂದು 'ಧ' ಮಹಾಪ್ರಾಣ ಬಳಸುತ್ತಿವೆ. 'ಸಿಂದೂರ' ಎನ್ನುವ ಪ್ರಯೋಗವೂ ಜನಪ್ರಿಯವಾಗಿದೆ. ಈ ಪೈಕಿ ಈ ಸಂದರ್ಭಕ್ಕೆ ಹೊಂದುವ ಸರಿಯಾದ ಪದ ಯಾವುದು ಎನ್ನುವುದರ ಬಗ್ಗೆ ಈಗ ಜಿಜ್ಞಾಸೆ ಶುರುವಾಗಿದೆ. ಸಿಂಧೂರ vs ಸಿಂದೂರ ಯಾವುದು ಸರಿ, ಕುಂಕುಮದ ಅರ್ಥ ಬರುವುದು ಅಲ್ಪಪ್ರಾಣಕ್ಕೋ, ಮಹಾಪ್ರಾಣಕ್ಕೋ ಎಂಬ ಬಗ್ಗೆ ಫೇಸ್‌ಬುಕ್‌ನಲ್ಲಿ ವಿವರವಾಗಿ ಬರೆದಿದ್ದಾರೆ ಲೇಖಕ ಮಂಜುನಾಥ್ ಕೊಳ್ಳೆಗಾಲ. ಅವರ ಬರಹವನ್ನು ಇಲ್ಲಿ ಯಥಾವತ್ತು ಪ್ರಕಟಿಸಲಾಗಿದೆ.
ಸಿಂದೂರ = ಕುಂಕುಮ
ಸಿಂಧುರ = ಆನೆ
ಸಿಂಧೂರ ಎಂಬಂಥದ್ದೊಂದು ಪದ ಇಲ್ಲ - ಇಷ್ಟು ನಮ್ಮ ಗಮನದಲ್ಲಿರುವುದು ಒಳ್ಳೆಯದು.
'ಶ್ರೀ ಗಣನಾಥ ಸಿಂಧುರಾವರ್ಣ ಕರುಣಸಾಗರ ಕರಿವದನಾ' - ಎಂಬುದು ಶ್ರೀ ಪುರಂದರದಾಸರ ಸುಪ್ರಸಿದ್ಧ ಪಿಳ್ಳಾರಿ ಗೀತೆಯ ಜನಪ್ರಿಯಪಾಠ (ನಾನೂ ಬಾಲ್ಯದಿಂದ ಹೀಗೇ ಹೇಳಿಕೊ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.