ಭಾರತ, ಏಪ್ರಿಲ್ 1 -- ಕನ್ನಡ ಕಿರುತೆರೆಯಲ್ಲಿ ಹೆಸರು ಮಾಡಿದ್ದ ಸಾಕಷ್ಟು ನಟ-ನಟಿಯರು ಪರಭಾಷೆಯ ಧಾರಾವಾಹಿಗಳಲ್ಲಿ ಮಿಂಚುತ್ತಿದ್ದಾರೆ. ಅಂಥವರಲ್ಲಿ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾದ 'ಮನೆದೇವ್ರು' ಧಾರಾವಾಹಿ ಖ್ಯಾತಿಯ ನಟ ಜೇಯ್ ಡಿಸೋಝಾ ಕೂಡ ಒಬ್ಬರು. ಕಾರವಾರ ಮೂಲದ ಈ ನಟ ತಮಿಳು ಹಾಗೂ ತೆಲುಗು ಕಿರುತೆರೆ ಕ್ಷೇತ್ರದಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ.

2016ರಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮನೆದೇವ್ರು ಧಾರಾವಾಹಿ ಸಾಕಷ್ಟು ಪ್ರಸಿದ್ಧಿ ಪಡೆದಿತ್ತು. ಈ ಧಾರಾವಾಹಿ ನಾಯಕ ಸೂರ್ಯನ ಪಾತ್ರದಲ್ಲಿ ಜನಮನ್ನಣೆ ಗಳಿಸಿದ್ದರು ಜೇಯ್‌. ಈ ಧಾರಾವಾಹಿಯ ಪಾತ್ರ ಇವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಮಾತ್ರವಲ್ಲ ಈಗಲೂ ಅವರನ್ನು ಮನೆದೇವ್ರು ನಟ ಎಂದೇ ಜನ ಗುರುತಿಸುತ್ತಾರೆ.

ಈ ಧಾರಾವಾಹಿಯ ಬಳಿಕ ತೆಲುಗು ಕಿರುತೆರೆಗೆ ಪದಾರ್ಪಣೆ ಮಾಡುತ್ತಾರೆ ಜೇಯ್‌. ತೆಲುಗಿನ ಸ್ಟಾರ್ ಮಾ ವಾಹಿನಿಯಲ್ಲಿ ಪ್ರಸಾರವಾದ 'ಪವಿತ್ರ ಬಂಧನಂ' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುತ್ತಾರೆ. ನಂತರ ಈ ಟಿವಿಯಲ್ಲಿ ಪ್ರಸಾರವಾ...