ಭಾರತ, ಏಪ್ರಿಲ್ 1 -- ಕನ್ನಡ ಕಿರುತೆರೆಯಲ್ಲಿ ಹೆಸರು ಮಾಡಿದ್ದ ಸಾಕಷ್ಟು ನಟ-ನಟಿಯರು ಪರಭಾಷೆಯ ಧಾರಾವಾಹಿಗಳಲ್ಲಿ ಮಿಂಚುತ್ತಿದ್ದಾರೆ. ಅಂಥವರಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ 'ಮನೆದೇವ್ರು' ಧಾರಾವಾಹಿ ಖ್ಯಾತಿಯ ನಟ ಜೇಯ್ ಡಿಸೂಝಾ ಕೂಡ ಒಬ್ಬರು. ಕಾರವಾರ ಮೂಲದ ಈ ನಟ ತಮಿಳು ಹಾಗೂ ತೆಲುಗು ಕಿರುತೆರೆ ಕ್ಷೇತ್ರದಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ.
2016ರಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮನೆದೇವ್ರು ಧಾರಾವಾಹಿ ಸಾಕಷ್ಟು ಪ್ರಸಿದ್ಧಿ ಪಡೆದಿತ್ತು. ಈ ಧಾರಾವಾಹಿ ನಾಯಕ ಸೂರ್ಯನ ಪಾತ್ರದಲ್ಲಿ ಜನಮನ್ನಣೆ ಗಳಿಸಿದ್ದರು ಜೇಯ್. ಈ ಧಾರಾವಾಹಿಯ ಪಾತ್ರ ಇವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಮಾತ್ರವಲ್ಲ ಈಗಲೂ ಅವರನ್ನು ಮನೆದೇವ್ರು ನಟ ಎಂದೇ ಜನ ಗುರುತಿಸುತ್ತಾರೆ.
ಈ ಧಾರಾವಾಹಿಯ ಬಳಿಕ ತೆಲುಗು ಕಿರುತೆರೆಗೆ ಪದಾರ್ಪಣೆ ಮಾಡುತ್ತಾರೆ ಜೇಯ್. ತೆಲುಗಿನ ಸ್ಟಾರ್ ಮಾ ವಾಹಿನಿಯಲ್ಲಿ ಪ್ರಸಾರವಾದ ಪವಿತ್ರ ಬಂಧನಂ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುತ್ತಾರೆ. ನಂತರ ಈ ಟಿವಿಯಲ್ಲಿ ಪ್ರಸಾರವಾದ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.