Bengaluru, ಏಪ್ರಿಲ್ 18 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಗುರುವಾರ ಏಪ್ರಿಲ್ 17ರ ಸಂಚಿಕೆಯಲ್ಲಿ ಸಂತೋಷ್, ವೀಣಾಳ ಮಾಂಗಲ್ಯ ಸರದ ಕೊಂಡಿ ಕಳಚಿರುವುದರಿಂದ, ಅದನ್ನು ತೆಗೆದುಕೊಂಡು ರಿಪೇರಿಗೆ ಹೋಗಿರುತ್ತಾನೆ. ಆಗ ಚಿನ್ನದ ಅಂಗಡಿಯವನ ಜೊತೆ ಹಾಗೂ ಹೀಗೂ ಮಾತುಕತೆ ಮಾಡುತ್ತಿರುವಾಗ, ಹರೀಶ ಅಲ್ಲಿ ಬಂದು ನಕಲಿ ಒಡವೆ ಮಾಡಿಸಿಕೊಂಡು ಹೋಗಿರುವುದು ಗೊತ್ತಾಗುತ್ತದೆ. ಆದರೂ, ಅದನ್ನೊಮ್ಮೆ ಮರುಪರಿಶೀಲಿಸಲು ಸಂತೋಷ್, ಜುವೆಲ್ಲರಿ ಶಾಪ್‌ನವರ ಬಳಿ ಫೋಟೊ ನೋಡಿಕೊಂಡು ದೃಢಪಡಿಸಿಕೊಳ್ಳುತ್ತಾನೆ. ಅಷ್ಟರಲ್ಲಿ ಅದು ಸಿಂಚನಾಳ ಒಡವೆ ಮತ್ತು ಹರೀಶ ಅದರ ನಕಲಿ ಮಾಡಿಸಿರುವುದು ಗೊತ್ತಾಗುತ್ತದೆ. ನಂತರ ಸಂತೋಷ ಅಲ್ಲಿಂದ ತೆರಳುತ್ತಾನೆ.

ಮನೆಗೆ ಮರಳುವ ದಾರಿಯಲ್ಲಿ, ಸಂತೋಷನಿಗೆ ಅದುವೇ ಯೋಚನೆಯಾಗಿರುತ್ತದೆ. ಅದರಲ್ಲೂ ತನ್ನ ಐದು ಲಕ್ಷ ರೂಪಾಯಿ ಹಣ ಕಳವಾಗಿರುವುದಕ್ಕೆ ಹರೀಶನೇ ಕಾರಣ ಎಂದು ಅವನಿಗೆ ಗೊತ್ತಾಗುತ್ತದೆ. ಹೀಗಾಗಿ ಅವನಿಗೆ ಅದುವೇ ತಲೆಯಲ್ಲಿ ಯೋಚನೆಯಾಗಿರುತ್ತದೆ. ಆದ್ದರಿಂದ ಅವನು ದಾರಿಯಲ್ಲಿ ಸಿಕ್ಕ ಪೊ...