ಭಾರತ, ಫೆಬ್ರವರಿ 16 -- ಮಂಗಳೂರು: ಕರ್ನಾಟಕವನ್ನು ಬೆಚ್ಚಿಬೀಳಿಸಿದ ಬಂಟ್ವಾಳ ತಾಲೂಕಿನ ಕೊಳ್ನಾಡು ಸಮೀಪದ ಬೋಳಂತೂರು ನಾರ್ಶದ ನಿವಾಸಿ, ಸಿಂಗಾರಿ ಬೀಡಿ ಉದ್ಯಮ ಸಹಿತ ಹಲವು ವಹಿವಾಟುಗಳನ್ನು ನಡೆಸುತ್ತಿದ್ದ ಸುಲೈಮಾನ್ ಅವರ ಮನೆಗೆ ಇಡಿ ಅಧಿಕಾರಿಗಳು ಎಂದು ಹೇಳಿಕೊಂಡು ನಕಲಿ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದ ತನಿಖಾ ತಂಡ ಕೇರಳದ ಪೊಲೀಸ್ ಎಎಸ್ ಐ ಓರ್ವನನ್ನು ಬಂಧಿಸಿದೆ. ಪ್ರಕರಣ ಕ್ಕೆ ಸಂಬಂಧಿಸಿದಂತೆ ಸುಲೈಮಾನ್ ಅವರ ಪುತ್ರ ಇಕ್ಬಾಲ್ ವಿಟ್ಲ ಪೊಲೀಸರಿಗೆ ದೂರು ನೀಡಿದ್ದರು. ಇದರೊಂದಿಗೆ ಪ್ರಮುಖ ಆರೋಪಿಯೊಬ್ಬನನ್ನು ಬಂಧಿಸಿದಂತಾಗಿದ್ದು, ಈತನೇ ದಾಳಿಗೆ ಸೂತ್ರಧಾರನಾಗಿದ್ದ ಎಂದು ಹೇಳಲಾಗುತ್ತಿದೆ.

ಎಂ.ಸುಲೈಮಾನ್ ಅವರ ಮನೆಯಲ್ಲಿ ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳ ಸೋಗಿನಲ್ಲಿ ದಾಳಿ ನಡೆಸಿ ಸುಮಾರು 30 ಲಕ್ಷ ರೂಗಳಷ್ಟು ದರೋಡೆ ಮಾಡಿದ ಪ್ರಕರಣದಲ್ಲಿ ಕೇರಳದ ತ್ರಿಶೂರ್ ಜಿಲ್ಲೆಯ ಕೊಡುಂಗಲ್ಲೂರು ಠಾಣೆಯ ಎಎಸ್‌ಐ ಇರಿಂಙಾಲಕ್ಕುಡ ನಾಗಲಕುಡ ಕಾಟ್ಟುಂಙಚಿರ ನಿವಾಸಿ ಎಎಸ್ ಐ ಶಾಹೀರ್ ಬಾಬು (50) ಎಂಬಾತನನ್ನು ವಿಟ್ಲ ಪೊ...