ಭಾರತ, ಮಾರ್ಚ್ 26 -- ಯಾವುದಾದರೂ ಪ್ರಶಸ್ತಿಗಳು ಬಂದಾಗ ಫಲಕಗಳು, ಹಾರ, ಸನ್ಮಾನ ಪತ್ರ ಮುಂತಾದವುಗಳ ಜೊತೆ ಉಡುಗೊರೆಯ ಬ್ಯಾಗೊಂದು ನೀಡುತ್ತಾರೆ. ಆದರೆ ಕೆಲವೊಮ್ಮೆ ಈ ಉಡುಗೊರೆ ಬ್ಯಾಗ್‌ನಲ್ಲಿ ಏನಿದೆ ಪಡೆದವರು ಎಂದು ಮನೆ ತಲುಪಿದ ಮೇಲೆಯೇ ನೋಡುತ್ತಾರೆ. ಹೀಗೆ ಮೊನ್ನೆ ನಡೆದ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ವಿತರಣಾ ಸಮಾರಂಭದ ನಂತರ ಉಡುಗೊರೆ ಬ್ಯಾಗ್ ಸಮೇತ ವಿಮಾನದಲ್ಲಿ ಹೊರಟ ಪತ್ರಕರ್ತ, ಲೇಖಕ ರಾಜಾರಾಂ ತಲ್ಲೂರು ಅವರನ್ನು ವಿಮಾನ ನಿಲ್ದಾಣದ ವರ್ಚುವಲ್ ಸೆಕ್ಯುರಿಟಿಯವರು ತಡೆದು ನಿಲ್ಲಿಸುತ್ತಾರೆ. ಅವರ ಬ್ಯಾಗ್‌ನಲ್ಲಿರುವ ಆ 'ಸ್ಪೋಟಕ' ಉಡುಗೊರೆಯೇ ಅದಕ್ಕೆ ಕಾರಣ. ಅದೇನಪ್ಪಾ ಅಂಥ ಸ್ಪೋಟಕ ಸಾಹಿತ್ಯ ಅಕಾಡೆಮಿಯವರು ಕೊಟ್ಟ ಉಡುಗೊರೆ ಬ್ಯಾಗ್‌ನಲ್ಲಿತ್ತು ಅಂತೀರಾ, ಈ ಬಗ್ಗೆ ಬಹಳ ಹಾಸ್ಯಮಯವಾಗಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ ರಾಜಾರಾಂ ತಲ್ಲೂರು. ಅವರ ಬರಹವನ್ನು ನೀವೂ ಓದಿ. ಆ ಸ್ಪೋಟಕ ಯಾವುದು ಅಂತ ತಿಳ್ಕೊಳ್ಳಿ.

ಸಾಹಿತ್ಯ ಅಕಾಡೆಮಿಯ 'ಸ್ಫೋಟಕ' ಉಡುಗೊರೆ!

ಇದು 'ವಿಷಯ ಸ್ವಲ್ಪ ಗಂಭೀರವೇ ಆದರೂ, ಲಘುವಾ...