ಭಾರತ, ಏಪ್ರಿಲ್ 26 -- ಗೌತಮ್‌ ದಿವಾನ್‌- ಮಗಳಿಗೆ ಹೇಳಲಾಗದು. ಇಷ್ಟು ದಿನ ಕಷ್ಟ ಸುಖ ಒಟ್ಟಿಗೆ ಇದ್ದೇವೆ. ನಾವು ಜತೆಯಾಗಿ ಹೋಗೋಣ ಎಂದು ಸದಾಶಿವ ಮೇಷ್ಟ್ರು ಹೇಳುತ್ತಾರೆ. "ನನ್ನ ಕೊನೆಯ ಆಸೆ ಇದೆ .. ಕೊನೆಯ ಬಾರಿ ಅಪ್ಪಿ, ಗೌತಮ್‌, ಭೂಮಿಕಾಳನ್ನು ನೋಡಿಕೊಂಡು ಹೋಗೋಣ" ಎಂದು ಮಂದಾಕಿನಿ ಹೇಳುತ್ತಾರೆ. "ಸರಿ, ಅವರಿಗೆ ತಿಂಡಿ ಬೇಕರಿಯಿಂದ ತರೋಣ. ಮನೆಯಲ್ಲಿ ಮಾಡಿದ್ದು ಮನೆಯಲ್ಲಿಯೇ ಇದೆ" ಎಂದು ಸದಾಶಿವ ಹೇಳುತ್ತಾರೆ. ಹೀಗೆ ಇವರು ಕೊನೆಯ ಬಾರಿ ಭೂಮಿಯನ್ನು ನೋಡಲು ಹೋಗುತ್ತಾರೆ.

ಗೌತಮ್‌ ಮತ್ತು ಭೂಮಿಕಾ ಮಾತನಾಡುವಾಗ ಮನೆಗೆ ಸದಾಶಿವ ಮತ್ತು ಮಂದಾಕಿನಿ ಬರುತ್ತಾರೆ. ಬಂದವರನ್ನು ಪ್ರೀತಿಯನ್ನು ಮಲ್ಲಿ ಮಾತನಾಡಿಸುತ್ತಾಳೆ. ಈ ಬಾರಿ ಅಪ್ಪಿ ನಮ್ಮನ್ನು ಮಾತನಾಡಿಸ್ತಾಳ? ಈ ಬಾರಿ ಮಾತನಾಡದೆ ಇದ್ದರೆ ಜೀವನಪೂರ್ತಿ ಮಾತನಾಡಲು ಸಾಧ್ಯವಿಲ್ಲ ಎಂದು ಅವರು ಯೋಚಿಸುತ್ತಾರೆ.

ಮಹಿಮಾ ಯಾರಿಗೆ ಈ ವಿಷಯ ಹೇಳಲಿ ಎಂದು ಯೋಚಿಸುತ್ತಾಳೆ. ಅತ್ತಿಗೆಗೆ ಹೇಳಲಾಗದು. ಅವರು ಪ್ರೆಗ್ನೆಂಟ್‌, ಆದರೆ, ಅಣ್ಣನಿಗೆ ಹೇಳಬಹುದು ಎಂದು ಅಣ್ಣನಿಗೆ ಕಾಲ್‌ ಮಾ...