ಭಾರತ, ಮಾರ್ಚ್ 18 -- ಮಂಗಳೂರು: ಈ ಯುವ ವಕೀಲನ ಹೆಸರು ಪ್ರಥಮ್ ಬಂಗೇರ. ವಯಸ್ಸು 27. ಸದಾ ಚಟುವಟಿಕೆಯ ವ್ಯಕ್ತಿ. ಲವಲವಿಕೆಯಿಂದ ಕೂಡಿರುವ ಹುಡುಗ. ಸಾಂಸ್ಕೃತಿಕ ಚಟುವಟಿಕೆಗಳಿದ್ದಾಗ ಡ್ಯಾನ್ಸ್ ಶೋ ನೀಡುವುದರಲ್ಲಿ ಮುಂದು. ಯಾರಿಗಾದರೂ ಕಷ್ಟವಿದ್ದರೆ ಉಪಕಾರ ಮಾಡುವುದರಲ್ಲೂ ಮೊದಲಿಗ. ಬಡವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ತಂದೆ ವಾಮನ ಸಾಲಿಯಾನ್ ಅವರು ಮಗನನ್ನು ಎಲ್‌ಎಲ್‌ಬಿ ಓದಿಸಿದರು. ಉತ್ತಮ ಅಂಕ ಗಳಿಸಿ ತೇರ್ಗಡೆಯಾದ ಪ್ರಥಮ್, ತನ್ನ ಹುಟ್ಟೂರಾದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಹಿರಿಯ ವಕೀಲರೊಬ್ಬರ ಬಳಿ ಪ್ರಾಕ್ಟೀಸ್ ಮಾಡುತ್ತಿದ್ದ. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಅಪಘಾತವೊಂದು ಆತನ ಪ್ರಾಣವನ್ನೇ ಕಸಿದಿತ್ತು.

ಕಳೆದ ವಾರ ಬಿ.ಸಿ.ರೋಡ್ ಮುಖ್ಯ ವೃತ್ತದ ಬಳಿ ಪ್ರಥಮ್ ಬೈಕಿನಲ್ಲಿ ತೆರಳುತ್ತಿದ್ದಾಗ ಅಲ್ಲಿದ್ದ ಡಿವೈಡರ್‌ಗೆ ಡಿಕ್ಕಿಯಾಗಿ ಬಿದ್ದಿದ್ದಾರೆ. ಕೂಡಲೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಂದು ವಾರ ಕೋಮಾದಲ್ಲಿದ್ದು ಸಾವು, ಬದುಕಿನ ನಡುವೆ ಹೋರಾಡಿದ ಪ್ರಥಮ್ ಬಂಗೇರ ಅವರ ...