ಭಾರತ, ಮೇ 12 -- ಜೀ ಕನ್ನಡದ ಪ್ರಸಿದ್ಧ ರಿಯಾಲಿಟಿ ಷೋ ಕಾಮಿಡಿ ಕಿಲಾಡಿ ಮೂಲಕ ಕರುನಾಡಿಗೆ ಪರಿಚಿತರಾಗಿ ತಮ್ಮ ವಿಭಿನ್ನ ಹಾಸ್ಯಗಳ ಮೂಲಕ ಕರುನಾಡನ್ನು ನಕ್ಕು ನಗಿಸಿ, ಕಾಮಿಡಿ ಕಿಲಾಡಿ ಪಟ್ಟ ಗಿಟ್ಟಿಸಿಕೊಂಡಿದ್ದ ಉಡುಪಿ ಮೂಲದ ರಾಕೇಶ್‌ ಪೂಜಾರಿ ಇಹಲೋಕ ತ್ಯಜಿಸಿದ್ದಾರೆ. ಇಂದು (ಮೇ 12) ಬೆಳಗಿನ ಜಾವ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಲೋ ಬಿಪಿ ಹಾಗೂ ಪಲ್ಸ್‌ ರೇಟ್‌ ಕಡಿಮೆಯಾಗಿರುವುದು ಇವರ ಸಾವಿಗೆ ಕಾರಣ ಎನ್ನಲಾಗುತ್ತಿದೆ. ಕಾಮಿಡಿ ಕಿಲಾಡಿ ನಂತರ ರಾಕೇಶ್‌ ಜೀ ಕನ್ನಡದಲ್ಲಿ ಪ್ರಸಾರವಾದ ಹಿಟ್ಲರ್‌ ಕಲ್ಯಾಣ ಧಾರಾವಾಹಿಯಲ್ಲೂ ನಟಿಸಿದ್ದರು.

ಕಾಮಿಡಿ ಕಿಲಾಡಿ ಪಟ್ಟ ಗಿಟ್ಟಿಸಿಕೊಂಡ ನಂತರ ಜೀ ಕನ್ನಡದಲ್ಲಿ ಪ್ರಸಾರವಾದ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜನರನ್ನು ನಕ್ಕು ನಲಿಸಿದ್ದರು ರಾಕೇಶ್‌. ಇವರು ವೇದಿಕೆ ಮೇಲೆ ಬಂದರು ಎಂದರೇ ಜನರ ಮುಖದಲ್ಲೇ ನಗುವಿನ ಅಲೆ ತುಂಬುತ್ತಿತ್ತು.

2020 ರಲ್ಲಿ ನಡೆದ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಷೋ ಸೀಸನ್‌ 3ರ ಪಟ್ಟ ಮುಡಿಗೇರಿಸಿಕೊಂಡಿದ್ದ ರಾಕೇಶ್‌ ಸಿನಿಮ...