ಭಾರತ, ಮಾರ್ಚ್ 22 -- ಭಾರತ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಭೂಮಿಗೆ ಮರಳಿ ಮೂರು ದಿನಗಳಾಗಿವೆ. ಆಕೆ ಹಾಗೂ ಸಹ ಯಾತ್ರಿ ವಿಲ್ಮೋರ್ ಬುಚ್‌ ಒಂಬತ್ತು ತಿಂಗಳ ಕಾಲ ಅಂತರಿಕ್ಷದಲ್ಲೇ ಇದ್ದರು. ಕಳೆದೊಂದಿಷ್ಟು ದಿನಗಳಿಂದ ಸುನಿತಾ ವಿಲಿಯಮ್ಸ್ ಬಗ್ಗೆ ಸಾಕಷ್ಟು ಸುದ್ದಿ, ಫೋಟೊ, ವಿಡಿಯೊಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಫೋಟೊ ಇದೆ. ಈ ಫೋಟೊ ನಿಜಕ್ಕೂ ಹೃದಯಸ್ಪರ್ಶಿ ಅನ್ನಿಸೋದು ಸುಳ್ಳಲ್ಲ. ಅಲ್ಲದೇ ಆ ಫೋಟೊ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಹಾಗಾದರೆ ಆ ಫೋಟೊದಲ್ಲಿ ಅಂಥದ್ದೇನಿದೆ ಅಂತೀರಾ, ಅದು ಸಾರ್ವಜನಿಕ ಲೈಬ್ರರಿ ಒಂದರಲ್ಲಿ ಗ್ರಾಮೀಣ ಮಹಿಳೆಯೊಬ್ಬರು ಸುನಿತಾ ವಿಲಿಯಮ್ಸ್ ಕುರಿತ ಸುದ್ದಿಯನ್ನು ದಿಟ್ಟಿಸಿ ನೋಡುತ್ತಿರುವುದು. ಈ ಫೋಟೊಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕರ್ನಾಟಕದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತೆ ಉಮಾ ಮಹಾದೇವನ್ ದಾಸ್‌ಗುಪ್ತ ಈ ಫೋಟವನ್ನು ಹಂಚಿಕೊಂಡಿದ್ದಾರೆ. ಉಡುಪಿಯ ಕರ್ಜೆಯಲ್ಲಿರುವ ಉಚಿತ ಸಾರ್ವಜನಿಕ ಗ...