Bangalore, ಮೇ 24 -- ಕಾಲಿವುಡ್‌ ನಟ ರವಿ ಮೋಹನ್ ಮತ್ತು ಅವರ ಪತ್ನಿ ಆರತಿ ಕಳೆದ ಕೆಲವು ದಿನಗಳಿಂದ ಕೌಟುಂಬಿಕ ಕಲಹದಿಂದ ಸುದ್ದಿಯಲ್ಲಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಪರಸ್ಪರ ಹೇಳಿಕೆಗಳನ್ನು ನೀಡುತ್ತ ಜನರ ಬಾಯಿಗೆ ಆಹಾರವಾಗುತ್ತಿದ್ದಾರೆ. ಇದೀಗ ನಟ ರವಿ ಮೋಹನ್ ಮತ್ತು ಅವರ ಪತ್ನಿ ಆರತಿ ಅವರು ಸಾರ್ವಜನಿಕವಾಗಿ ಪರಸ್ಪರರ ಬಗ್ಗೆ ಯಾವುದೇ ಅವಹೇಳನಕಾರಿ ಹೇಳಿಕೆಗಳನ್ನು ನೀಡದಂತೆ ಮದ್ರಾಸ್ ಹೈಕೋರ್ಟ್ ನಿರ್ದೇಶನ ನೀಡಿದೆ. ವಿಚ್ಛೇದನ ಪ್ರಕ್ರಿಯೆ ನಡೆಯುತ್ತಿರುವ ಮಧ್ಯೆ ಈ ಹೈಕೋರ್ಟ್‌ ತೀರ್ಪು ಬಂದಿದೆ.

ಇಬ್ಬರೂ ಘನತೆಯನ್ನು ಕಾಪಾಡಿಕೊಳ್ಳಬೇಕು. ಪರಸ್ಪರರ ಖ್ಯಾತಿಗೆ ಧಕ್ಕೆ ತರುವಂತಹ ಕಾಮೆಂಟ್‌ಗಳನ್ನು ಮಾಡಬಾರದು ಎಂದು ಕೋರ್ಟ್‌ ಒತ್ತಿ ಹೇಳಿದೆ. ಆರತಿ ಮತ್ತು ಅವರ ತಾಯಿ ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡದಂತೆ ತಡೆಯಾಜ್ಞೆ ಕೋರಿ ರವಿ ಮೋಹನ್ ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ ಕೋರ್ಟ್‌ ಈ ಆದೇಶ ನೀಡಿದೆ.

ಇತ್ತೀಚೆಗೆ ರವಿ ಮೋಹನ್ ಮತ್ತು ಗಾಯಕಿ ಕೆನಿಷಾ ಮದುವೆ ಕಾರ್ಯಕ್ರಮವೊಂದರಲ್ಲಿ ಒಟ್ಟಿಗೆ ಕಾಣ...