ಭಾರತ, ಏಪ್ರಿಲ್ 22 -- ಚಿನ್ನದ ದರ: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಚಿನ್ನದ ದರ 1 ಲಕ್ಷ ರೂಪಾಯಿ ಆಸುಪಾಸು ತಲುಪಿದ್ದು, ಜಿಎಸ್‌ಟಿ ಸೇರಿದಾಗ 1 ಲಕ್ಷ ರೂಪಾಯಿ ಗಡಿ ದಾಟಿದೆ. ಭಾರತದ ಚಿನಿವಾರ ಪೇಟೆಯಲ್ಲಿ ಸೋಮವಾರ ಸಂಜೆ ಪ್ರತಿ 10 ಗ್ರಾಂ ಅಪರಂಜಿ ಚಿನ್ನ (24 ಕ್ಯಾರೆಟ್‌) ದ ದರ 97.200 ರೂಪಾಯಿ ಆಗಿದೆ. ಇದಕ್ಕೆ ಶೇಕಡ 3 ಜಿಎಸ್‌ಟಿ ಸೇರುವ ಕಾರಣ ಬೆಲೆ 1,00,120 ರೂಪಾಯಿ ಆಗಿದೆ. 2025ರಲ್ಲಿ ಇದುವರೆಗೆ ಚಿನ್ನದ ದರ 10 ಗ್ರಾಂಗೆ ಶೇಕಡ 26 ಅಂದರೆ 20,800 ರೂಪಾಯಿ ಏರಿಕೆ ಕಂಡಿದೆ.

ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, ಬೆಂಗಳೂರಿನಲ್ಲಿ ಇಂದಿನ ಬಂಗಾರದ ಬೆಲೆ ವಿವರ ಹೀಗಿದೆ -24 ಕ್ಯಾರೆಟ್‌ ಅಪರಂಜಿ ಚಿನ್ನಕ್ಕೆ 10 ಗ್ರಾಂಗೆ 98,360 ರೂಪಾಯಿ ಇದೆ. ನಿನ್ನೆ (ಏಪ್ರಿಲ್ 21) ಇದು 98,350 ರೂಪಾಯಿ ಇತ್ತು. ಆಭರಣ ಚಿನ್ನದ (22 ಕ್ಯಾರೆಟ್‌) ದರ 10 ಗ್ರಾಂಗೆ 96,160 ರೂಪಾಯಿ ಇದ್ದು, ನಿನ್ನೆ (ಏಪ್ರಿಲ್ 21) 10 ಗ್ರಾಂಗೆ 96,150 ರೂಪಾಯಿ ಇತ್ತು. 18 ಕ್ಯಾರೆಟ್ ಚಿನ್ನದ ದರ ಇಂದು (ಏಪ್ರಿಲ್ 22) 73,770 ರೂಪಾಯಿ ಇದ...