ಭಾರತ, ಮಾರ್ಚ್ 15 -- Painkillers Side Effects: ತಲೆನೋವು, ಹಲ್ಲುನೋವು ಅಥವಾ ದೇಹದ ಯಾವುದೇ ಭಾಗದಲ್ಲಿ ಸಾಮಾನ್ಯನೋವು ಕಾಣಿಸಿದಾಗ ವೈದ್ಯರ ಬಳಿಗೆ ಹೋಗದೇ ನಾವೇ ಪೇನ್‌ಕಿಲ್ಲರ್ ತಿನ್ನುವ ಮೂಲಕ ನೋವು ನಿವಾರಿಸುವ ಪ್ರಯತ್ನ ಮಾಡುತ್ತೇವೆ. ವೈದ್ಯರು ಕೂಡ ನೋವು ಹಾಗೂ ಉರಿಯೂತಕ್ಕೆ ಚಿಕಿತ್ಸೆ ರೂಪದಲ್ಲಿ ನೋವು ನಿವಾರಕಗಳನ್ನು ಶಿಫಾರಸು ಮಾಡುತ್ತಾರೆ. ಆದರೆ ಎನ್‌ಎಸ್‌ಎಐಡಿ (NSAID) ಗಳು ಎಂಬ ನಿರ್ದಿಷ್ಟ ಗುಂಪಿನ ನೋವು ನಿವಾರಕಗಳು ಅಥವಾ ಪೇನ್‌ಕಿಲ್ಲರ್‌ ಔಷಧಿಗಳನ್ನು ಅತಿಯಾಗಿ ಸೇವಿಸಿದರೆ ಅವುಗಳನ್ನು ಮೂತ್ರಪಿಂಡದ ಆರೋಗ್ಯಕ್ಕೆ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ.

ಗುಜರಾತ್‌ನ ವಡೋದರಾದ ಭೈಲಾಲ್ ಅಮೀನ್ ಜನರಲ್ ಆಸ್ಪತ್ರೆಯ ಸಲಹೆಗಾರ ಮೂತ್ರಪಿಂಡಶಾಸ್ತ್ರಜ್ಞ ಮತ್ತು ಕಸಿ ವೈದ್ಯ ಡಾ. ಪ್ರದ್ನ್ಯಾ ಹರ್ಷೆ ಎಚ್‌ಟಿ ಲೈಫ್‌ಸ್ಟೈಲ್‌ಗೆ ನೀಡಿದ ಸಂದರ್ಶನದಲ್ಲಿ ಎನ್‌ಎಸ್‌ಎಐಡಿ (NSAID) ಅತಿಯಾದ ಸೇವನೆಯ ಅಪಾಯಗಳನ್ನು ವಿವರಿಸಿದ್ದಾರೆ.

'ಡಿಕ್ಲೋಫೆನಾಕ್, ಐಬುಪ್ರೊಫೆನ್, ಅಸೆಕ್ಲೋಫೆನಾಕ್ ಮತ್ತು ಪಿರೋಕ್ಸಿಕ್ಯಾಮ್‌ನಂತಹ ಸ...