Banglore, ಫೆಬ್ರವರಿ 13 -- ಒಟಿಟಿಯಲ್ಲಿ ಕ್ರೈಮ್ ಥ್ರಿಲ್ಲರ್ ಹಾಗೂ ಭಯಹುಟ್ಟಿಸುವಂತ ಹಾರರ್ ಸಿನಿಮಾಗಳು ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿದ್ದವು. ಆದರೆ, ಈಗ ಫ್ಯಾಮಿಲಿ ಡ್ರಾಮಾ ಸಿನಿಮಾವೊಂದು ಟ್ರೆಂಡ್ ಆಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಬಿಡುಗಡೆಯಾದ ಹಿಂದಿ ಚಲನಚಿತ್ರ Mrs ಸಿನಿಮಾ ಜನಪ್ರಿಯತೆ ಗಳಿಸಿದೆ. ಸಾಕಷ್ಟು ಜನ ಈ ಸಿನಿಮಾ ಯಾವ ಒಟಿಟಿಯಲ್ಲಿ ಬಿಡುಗಡೆಯಾಗಿದೆ ಎಂದು ಹುಡುಕುತ್ತಿದ್ದಾರೆ. ಇದು ಗೂಗಲ್ ನಲ್ಲಿ ಹೆಚ್ಚು ಹುಡುಕಲ್ಪಟ್ಟ ಚಿತ್ರ ಎಂದು ಹೇಳಲಾಗುತ್ತಿದೆ. ಈ ಹುಡುಕಾಟವೇ.. ಸಿನಿಮಾವು ಪ್ರೇಕ್ಷಕರಿಂದ ಯಾವ ರೀತಿಯ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ ಎಂಬುದನ್ನು ತಿಳಿಸಿಬಿಡುತ್ತದೆ. ವಿಶೇಷವಾಗಿ ಸಾನ್ಯಾ ಮಲ್ಹೋತ್ರಾ ಅವರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಈ ಒಟಿಟಿಯಲ್ಲಿ ಲಭ್ಯಸಾನ್ಯ ಅಭಿನಯದ Mrs ಸಿನಿಮಾ ಸಾಮಾಜಿಕ ಜಾಲತಾಣಗಳಲ್ಲೂ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮದುವೆಯಾದ ಹೆಣ್ಣೊಬ್ಬಳ ಕಷ್ಟವನ್ನು ಸ್ಪಷ್ಟವಾಗಿ ಈ ಸಿನಿಮಾದಲ್ಲಿ ತೋರಿಸಲಾಗಿದೆ. ಜೀ5 ಒಟಿಟಿಯಲ್ಲಿ ಈ ಸಿನಿಮಾ ಬಿಡುಗಡೆಯಾಗ...