Bengaluru, ಏಪ್ರಿಲ್ 15 -- ಸಸ್ಯಾಹಾರಿಗಳಿಗೆ ಪ್ರೋಟೀನ್ ಕೊರತೆ ಬಗ್ಗೆ ಸಾಮಾನ್ಯವಾಗಿ ಆತಂಕವಿರುತ್ತದೆ. ಫಿಟ್ನೆಸ್ ಆಸಕ್ತರಿಗೆ ಪ್ರೋಟೀನ್ ಅಗತ್ಯತೆ ಬಗೆಗಿನ ಅರಿವು ಬಹಳ ಚೆನ್ನಾಗಿಯೇ ಇರುತ್ತದೆ. ನಮ್ಮ ದೇಹದ ವಿವಿಧ ಅಂಗಗಳ ಉತ್ತಮ ಹಾಗು ಸದೃಢ ಬೆಳವಣಿಗೆಗೆ ಪ್ರೋಟೀನ್ ಅವಶ್ಯಕತೆಯಿದೆ. ಪ್ರೋಟೀನ್ ಎಂದ ಕೂಡಲೇ ನೆನಪಿಗೆ ಬರುವುದು ಮೊಟ್ಟೆ, ಚಿಕನ್ ಅಥವಾ ಪ್ರೋಟೀನ್ ಪೌಡರ್. ಸಸ್ಯಾಹಾರಿಗಳಿಗೂ ಪ್ರೋಟೀನ್ ಬೇಕೇ ಬೇಕು. ಮಾಂಸಾಹಾರವಲ್ಲದೆ ಸಸ್ಯಾಹಾರದಲ್ಲೂ ಪ್ರೋಟೀನ್ ಪಡೆದುಕೊಳ್ಳಬಹುದು. ಈ ಬಗ್ಗೆ ಇಲ್ಲಿದೆ ಇನ್ನಷ್ಟು ವಿವರ.

ಕಾಮಕಸ್ತೂರಿ, ಸೂರ್ಯಕಾಂತಿ ಹಾಗು ಕುಂಬಳಕಾಯಿ ಬೀಜ: ಈ ಬೀಜಗಳು ಪ್ರೋಟೀನ್, ಒಮೆಗಾ-3 ಕೊಬ್ಬಿನಾಮ್ಲ ಮತ್ತು ಫೈಬರ್‌ನ ಉತ್ತಮ ಮೂಲಗಳಾಗಿವೆ. ಚಿಯಾ ಬೀಜ ಅಥವಾ ಕಾಮಕಸ್ತೂರಿ ಬೀಜ ಒಂದು ಚಮಚದಲ್ಲಿ ಸುಮಾರು 3 ಗ್ರಾಂ ಪ್ರೋಟೀನ್ ಒದಗಿಸುತ್ತವೆ. ಇದನ್ನು ಸ್ಮೂಥಿ, ಸಲಾಡ್ ಅಥವಾ ನೀರಿನಲ್ಲಿ ನೆನೆಸಿ ಕುಡಿಯಬಹುದು. ಸೂರ್ಯಕಾಂತಿ ಹಾಗೂ ಕುಂಬಳಕಾಯಿ ಬೀಜಗಳನ್ನು ಹುರಿದಿಟ್ಟುಕೊಂಡು, ಸ್ಮೂಥಿ ತಯಾರಿಸಿ ಸೇವಿಸ...