Dakshina Kannada, ಏಪ್ರಿಲ್ 24 -- ಮಂಗಳೂರು: ಶಾಲಾ ಹಂತದಲ್ಲೇ ಪ್ರಕೃತಿಯ ಬಗ್ಗೆ ಅರಿವು, ಸಸ್ಯಪ್ರಭೇದದ ತಿಳಿವಳಿಕೆ ಮೂಡಿಸುವ ಉದ್ದೇಶದಿಂದ ವಿಶ್ವ ಭೂ ದಿನಾಚರಣೆಯ ಸಂದರ್ಭ ಶಾಲಾ ವಠಾರದ ಗಿಡ-ಮರಗಳಿಗೆ ಕ್ಯೂ ಆರ್ ಕೋಡ್ ಲಗತ್ತಿಸಿರುವ ಚಟುವಟಿಕೆ ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹಲವು ಶಾಲೆಗಳಲ್ಲಿ ಈ ರೀತಿ ಪ್ರಕೃತಿಯ ಕುರಿತು ಅರಿವು ಮೂಡಿಸುವ ಕೆಲಸವಾಗುತ್ತಿದೆ. ಕೇಂದ್ರ ಸರಕಾರದ ಮಿಷನ್ ಲೈಫ್ (ಪರಿಸರಕ್ಕಾಗಿ ಜೀವನ ಶೈಲಿ) ಪರಿಸರ ಜಾಗೃತಿಗೋಸ್ಕರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಸಮಗ್ರ ಶಿಕ್ಷಣ ಅಡಿಯಲ್ಲಿ ಇಕೋ ಕ್ಲಬ್ ಗಳ ಮೂಲಕ ''ಸಸ್ಯಕ್ಕಾಗಿ ಕ್ಯೂ ಆರ್ ಸಂಕೇತಗಳು'' ಎಂಬ ಚಟುವಟಿಕೆಯನ್ನು ಅನುಷ್ಠಾನಿಸಿದೆ. ಇದು ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾದ ಹೆಜ್ಜೆಯೂ ಆಗಿದೆ.

ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಜತೆಗೂಡಿ, ಶಾಲಾ ವಠಾರದ ಗಿಡ, ಮರಗಳ ಕುರಿತು ಅಧ್ಯಯನ ನಡೆಸಿ, ಅದರ ಮಾಹಿತಿಗಳನ್ನು ಕಲೆಹಾಕಿ, ಒಂದು ಪಿಡಿಎಫ್ ಫೈಲ್ ತಯಾರಿಸುತ್ತಾರೆ. ಅದಕ್ಕೆ ಒಂದು ಕ್ಯೂ ಆರ್ ಕೋಡ್ ಅನ್ನು ಸೃಷ್ಟಿಸಲಾಗ...