ಭಾರತ, ಮಾರ್ಚ್ 12 -- ಕಳೆದ ವಾರ, ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್ ಖಾನ್ ತಮ್ಮ ಮುಂಬರುವ ಚಿತ್ರ ಸಿಕಂದರ್‌ನ ಮೊದಲ ಮತ್ತು ಬಹುನಿರೀಕ್ಷಿತ ಹಾಡನ್ನು ಹಂಚಿಕೊಂಡಿದ್ದರು. 'ಜೋಹ್ರಾ ಜಬೀನ್' ಎಂಬ ಶೀರ್ಷಿಕೆಯ ಈ ಹಾಡು ವೈರಲ್ ಆಗಿತ್ತು. ಉತ್ಸಾಹಭರಿತ ಸಂಗೀತ, ಹೆಜ್ಜೆ, ತಾಳ ಎಲ್ಲಕ್ಕಿಂತ ಹೆಚ್ಚಾಗಿ ಸಲ್ಮಾನ್ ಮತ್ತು ಅವರ ಸಹನಟಿ ರಶ್ಮಿಕಾ ಮಂದಣ್ಣ ಅವರಿಬ್ಬರ ಕೆಮಿಸ್ಟ್ರಿಯಿಂದಾಗಿ ಇನ್ನಷ್ಟು ಜನರಿಗೆ ಈ ಹಾಡು ಹತ್ತಿರವಾಗಿತ್ತು. ಅಭಿಮಾನಿಗಳ ಹೃದಯ ಗೆದ್ದಿತ್ತು. ಸಲ್ಮಾನ್ ಮತ್ತು ರಶ್ಮಿಕಾ ಇಬ್ಬರೂ ಒಟ್ಟಾಗಿ ತುಂಬಾ ಚೆನ್ನಾಗಿ ಕಾಣಿಸುತ್ತಿದ್ದಾರೆ ಎಂಬ ಅಭಿಪ್ರಾಯವನ್ನು ಅಭಿಮಾನಿಗಳು ವ್ಯಕ್ತಪಡಿಸಿದ್ದರು. ಇಷ್ಟೇ ಸಾಲದು ಸಿನಿಮಾದ ಬಗ್ಗೆ ಇನ್ನಷ್ಟು ಅಪ್‌ಡೇಟ್‌ ಬೇಕು ಎಂಬ ಮಾತಂತು ಇದ್ದೇ ಇತ್ತು.

ರಶ್ಮಿಕಾ ಹಾಗೂ ಸಲ್ಮಾನ್‌ ಖಾನ್ ಒಟ್ಟಾಗಿ ಅಭಿನಯಿಸುತ್ತಿದ್ದಾರೆ ಎಂದಾಗಲೇ ಈ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಾಗಿತ್ತು. ಆದರೆ, ಆ ನಂತರದ ದಿನಗಳಲ್ಲಿ ಮೊದಲ ಹಾಡು ಬಿಡುಗಡೆಯಾದಾಗಿನಿಂದಲೂ ಅಭಿಮಾನಿಗಳು ಸಿನಿಮಾಕ್ಕೆ ಇನ್ನಷ್ಟು ಹ...