ಭಾರತ, ಮಾರ್ಚ್ 15 -- ಸರ್ವ ಸಿದ್ದಿ ಹನುಮ ಯಂತ್ರವು ಶಕ್ತಿಶಾಲಿ ಯಂತ್ರಗಳಲ್ಲಿ ಒಂದಾಗಿದೆ. ಶ್ರೀ ಆಂಜನೇಯನ ಪಾತ್ರವು ರಾಮಾಯಣದಲ್ಲಿ ಬಹು ಮುಖ್ಯ ಎಂದು ಎಲ್ಲರಿಗೂ ತಿಳಿದಿದೆ. ಶ್ರೀ ಆಂಜನೇಯನನ್ನು ಪೂಜಿಸಿದರೆ ಆತ್ಮ ಶಕ್ತಿಯು ಹೆಚ್ಚುತ್ತದೆ. ಜೀವನದಲ್ಲಿ ಯಶಸ್ಸು ಸುಲಭವಾಗಿ ದೊರೆಯುತ್ತದೆ. ಪಾಂಡವರ ಭೀಮಸೇನನಲ್ಲಿ ಇದ್ದ ಅಜ್ಞಾನವನ್ನು ಮತ್ತು ಅಹಂಕಾರವನ್ನು ಓಡಿಸಿದವನು ಶ್ರೀ ಆಂಜನೇಯ ಸ್ವಾಮಿ. ಅಷ್ಟು ದೊಡ್ಡ ಶಕ್ತಿಶಾಲಿಯಾದ ಭೀಮನಿಗೆ ರಾಮ ನಾಮವನ್ನು ಜಪಿಸುತ್ತಿದ್ದ ಹನುಮಂತನ ಬಾಣವನ್ನು ಪಕ್ಕದಲ್ಲಿ ಇರಿಸಲು ಸಾಧ್ಯವಾಗುವುದಿಲ್ಲ. ಇದೇ ರೀತಿ ಬಂಧನದಲ್ಲಿ ಇದ್ದ ನವಗ್ರಹಗಳನ್ನು ಆಂಜನೇಯ ಸ್ವಾಮಿಯು ಬಿಡುಗಡೆಗೊಳಿಸುತ್ತಾನೆ. ಇದರಿಂದ ಶ್ರೀ ಆಂಜನೇಯ ಸ್ವಾಮಿಯ ಪೂಜೆಯಿಂದ ನವಗ್ರಹಗಳ ಅನುಗ್ರಹವು ದೊರೆಯುತ್ತದೆ. ಈ ಯಂತ್ರವನ್ನು ಭಾನುವಾರ ಅಥವಾ ಗುರುವಾರದಂದು ಪೂಜಿಸಬೇಕು. ಕೇವಲ ಆಂಜನೇಯನನ್ನು ಪೂಜಿಸಿದರೆ ಯಾವುದೇ ಫಲ ದೊರೆಯುವುದಿಲ್ಲ. ಶ್ರೀರಾಮಚಂದ್ರ ಪಟ್ಟಾಭಿಷೇಕದ ಭಾವಚಿತ್ರವನ್ನು ಅಥವಾ ವಿಗ್ರಹವನ್ನು ಪೂಜಿಸುವುದರಿಂದ ಹೆಚ್ಚ...