Bengaluru, ಏಪ್ರಿಲ್ 23 -- ಜಮ್ಮು ಕಾಶ್ಮೀರದ ಪಹಲ್‌ಗಾಮ್ ಪ್ರಾಂತ್ಯದಲ್ಲಿ ಪ್ರವಾಸಿಗರ ಮೇಲೆ ನಡೆದ ಭೀಕರ ಉಗ್ರರ ದಾಳಿಯಲ್ಲಿ 26 ಜನ ಮೃತಪಟ್ಟಿದ್ದಾರೆ. ಅಲ್ಲದೇ, 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಉಗ್ರರ ಈ ಹೀನ ಕೃತ್ಯಕ್ಕೆ ಇಡೀ ದೇಶವೇ ಬೆಚ್ಚಿ ಬಿದ್ದಿದೆ. ಈ ಸಂದರ್ಭದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರವಿಕೃಷ್ಣ ರೆಡ್ಡಿ ಅವರು ಫೇಸ್‌ಬುಕ್‌ನಲ್ಲಿ ಕಾಶ್ಮೀರದ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕಾಶ್ಮೀರದಲ್ಲಿ ನಡೆಯುವ ಉಗ್ರದಾಳಿಯಿಂದ ನಾವು ಧೃತಿಗೆಡಬಾರದು, ಹಿಂಸೆಗೆ ಹೆದರಬಾರದು ಎನ್ನುವುದು ಅವರ ಬರಹದ ಆಶಯವಾಗಿದೆ. ರವಿಕೃಷ್ಣ ರೆಡ್ಡಿ ಫೇಸ್‌ಬುಕ್ ಬರಹದ ಯಥಾವತ್ ಪ್ರತಿ ಇಲ್ಲಿದೆ.

ಭಾರತದಂತಹ ದೇಶದಲ್ಲಿ ಧರಣಿ, ಪ್ರತಿಭಟನೆ, ಸತ್ಯಾಗ್ರಹದಂತಹ ಅಹಿಂಸಾತ್ಮಕ ಹೋರಾಟಗಳ ಮೂಲಕ ಪರಿಹಾರ ಕಂಡುಕೊಳ್ಳಲಾಗದ ಯಾವ ರಾಜಕೀಯ, ಸಾಮಾಜಿಕ ಸಮಸ್ಯೆಯೂ ಇಲ್ಲ. ಇಂತಹ ನೇರ, ಸಾತ್ವಿಕ, ಶಾಂತಿಯ ಮಾರ್ಗಗಳನ್ನು ಬಳಸದೆ ನೇರವಾಗಿ ಹಿಂಸೆಗೆ ಇಳಿಯುತ್ತಾರೆ ಎಂದರೆ ಅವರು ಹಿಂಸಾವಿನೋದಿ ರಾಕ್ಷಸರೇ ಹೊರತು ತಾವು ಪ್ರತಿಪಾ...