Bengaluru, ಏಪ್ರಿಲ್ 27 -- ಸರ್ಕಾರಿ ಸವಲತ್ತು, ಸಾರ್ವಜನಿಕ ಆಸ್ತಿ-ಪಾಸ್ತಿಗಳನ್ನು ಕೆಲವು ಜನರು ದುರ್ಬಳಕೆ ಮಾಡುವುದು ಆಗಾಗ ವರದಿಯಾಗುತ್ತಿರುತ್ತದೆ. ರೇಷನ್‌ ಅಕ್ಕಿಯ ಅಕ್ರಮ ಮಾರಾಟ, ಅಂಗನವಾಡಿಗೆ ಪೂರೈಕೆಯಾಗುವ ವಸ್ತುಗಳಲ್ಲಿ ಕಳ್ಳಾಟ, ಸರ್ಕಾರಿ ಆಹಾರ ಪದಾರ್ಥಗಳ ಅಕ್ರಮ ದಾಸ್ತಾನು ಹೀಗೆ ಸರ್ಕಾರದ ಸವಲತ್ತುಗಳ ದುರ್ಬಳಕೆಗೆ ಮಿತಿಯೇ ಇಲ್ಲದಂತಾಗಿದೆ. ಎಲ್ಲಾ ಜನರಿಗೆ ಸೇರಬೇಕಾದ ಸಾರ್ವಜನಿಕ ಸ್ವತ್ತುಗಳನ್ನು ಈ ರೀತಿ ಖಾಸಗಿಯಾಗಿ ಬಳಸುವುದು ಅಪರಾಧ. ಇದಕ್ಕೆ ಶಿಕ್ಷೆಯೂ ಆಗುತ್ತದೆ. ಹೀಗಾಗಿ ಸಾರ್ವಜನಿಕರಿಗೆ ಸೇರಿದ ವಸ್ತುಗಳನ್ನು ದುರ್ಬಳಕೆ ಮಾಡುವಾಗ ಎಚ್ಚರದಿಂದ ಇರಬೇಲು. ಇಂತಹದೇ ಪ್ರಕರಣವೊಂದು ಕೆಲವು ವಾರಗಳ ಹಿಂದೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿತ್ತು. ಇದು ಎಲ್ಲೆಡೆ ವೈರಲ್‌ ಆಗಿದೆ.

ತರಕಾರಿ ಮಾರಾಟಗಾರನೊಬ್ಬ ಬಿಎಂಟಿಸಿ ಬಸ್ ಟಿಕೆಟ್ ರೋಲ್‌ ಬಳಸಿ, ತನ್ನಿಂದ ತರಕಾರಿ ಖರೀದಿ ಮಾಡುತ್ತಿದ್ದವರಿಗೆ ಬಿಲ್ ನೀಡುತ್ತಿದ್ದ. ಈ ಕುರಿತು ಬಿಎಂಟಿಸಿ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿದ ನಂತರ, ಅಧಿಕಾರಿಯೊಬ್ಬರು ಸಾಮಾನ್ಯ ...