Chitradurga, ಫೆಬ್ರವರಿ 23 -- ಚಿತ್ರದುರ್ಗ: ಶಾಲೆ/ಕಾಲೇಜು ಎಂಬುದು ಜ್ಞಾನ ದೇಗುಲ. ಕೈ ಮುಗಿದು ಒಳಗೆ ಬಾ ಎನ್ನುವ ಘೋಷ ವಾಕ್ಯವು ಎಲ್ಲ ಕಡೆ ಕಾಣುತ್ತವೆ. ಆದರೆ ಕೆಲವು ಶಿಕ್ಷಣ ಸಂಸ್ಥೆಗಳು ನಿಜವಾಗಿಯೂ ಜ್ಞಾನ ನೀಡುವ ದೇಗುಲಗಳೇ ಆಗಿರುತ್ತವೆ. ಶಾಲೆಯನ್ನು ಶೈಕ್ಷಣಿಕ ದೇಗುಲವಾಗಿ ಮಾಡುವ ಇಂತಹ ಪ್ರಯತ್ನವನ್ನು ಸರ್ಕಾರಿ ಶಾಲೆಯ ಪ್ರೌಢಶಾಲೆಯೊಬ್ಬರು ಮಾಡಿದ್ದಾರೆ. ಇದಕ್ಕೇ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇಂದಿನ ವಿದ್ಯಾರ್ಥಿಗಳು ಮೊಬೈಲ್ ಆಕರ್ಷಣೆಯ ಹೊಡತಕ್ಕೆ ಸಿಕ್ಕಿ ತಮ್ಮ ಅಮೂಲವ್ಯವಾದ ಬದುಕಿನ ಮೌಲ್ಯಗಳನ್ನು ಮರೆಯುತ್ತಿದ್ದಾರೆ. ಅವರನ್ನು ಮತ್ತೆ ಸಾಹಿತ್ಯ, ಪುಸ್ತಕ, ಓದಿನ ಅಭಿರುಚಿಯತ್ತ ಆಕರ್ಷಿಸುವ ಸಲುವಾಗಿ ಶಾಲೆಯಲ್ಲಿ ಮಕ್ಕಳ ಸ್ನೇಹಿ ಗ್ರಂಥಾಲಯಕ್ಕೆ ನಿರ್ಮಾಣಕ್ಕೆ ಕೈ ಹಾಕಿ ಯಶಸ್ವಿಯಾಗಿದ್ದದಾಎ ಸರ್ಕಾರಿ ಪ್ರೌಢಶಾಲೆ(ಕೋಟೆ)ಯ ಚಿತ್ರಕಲಾ ಶಿಕ್ಷಕ ನಿರಂಜನಮೂರ್ತಿ.

"ನನ್ನ ಶಾಲೆ, ನನ್ನ ಕನಸು" ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಯಾವುದರಲ್ಲೂ ಕಡಿಮೆ ಇರಬಾರದು. ಖಾಸಗಿ ಶಾಲೆಯಲ್ಲಿ ಸಿಗುವ ಸೌಲಭ್ಯಗಳು ನನ್ನ ವಿದ್...