ಭಾರತ, ಜೂನ್ 2 -- ದಾವಣಗೆರೆ:ಸರ್ಕಾರಿ ಕಚೇರಿಗಳಿಗೆ ಗ್ರಾಮೀಣ ಭಾಗದ ಜನರನ್ನು ಅಲೆದಾಡಿಸದಂತೆ ಹರಪನಹಳ್ಳಿ ಅಧಿಕಾರಿಗಳು ಆಡಳಿತ ಸೇವೆ ನೀಡಬೇಕು ಎಂದು ದಾವಣಗೆರೆ ಕ್ಷೇತ್ರದ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ ಸೂಚಿಸಿದರು. ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರ‍್ರಾಮದಲ್ಲಿರುವ ಕೋಲಶಾಂತೇಶ್ವರ ಮಠದಲ್ಲಿ ಜಿಲ್ಲಾಡಳಿತ, ಜಿಪಂ ಸಹಯೋಗದಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಜನಸ್ಪಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಸೋಮವಾರ ಮಾತನಾಡಿದರು.
ಜನಸ್ಪಂದನ ಕಾರ್ಯಕ್ರಮದ ಮೂಲಕ ಸರ್ಕಾರವೇ ಜನರ ಬಳಿಗೆ ಬರುವಂತಾಗಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡುವ ಪ್ರಯತ್ನ ಇದಾಗಿದೆ. ಅರಸೀಕೆರೆ ಹೋಬಳಿಯಲ್ಲಿ ತುರ್ತಾಗಿ ಬಸ್ ನಿಲ್ದಾಣ, ಶೌಚಾಲಯ ನಿರ್ಮಾಣ, ಕುಡಿಯುವ ನೀರು, ಸೇರಿ ವಿದ್ಯಾರ್ಥಿಗಳಿಗೆ ನಿಗದಿತ ವೇಳೆಗೆ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸುವ ಅಗತ್ಯವಿದೆ. ಶಾಲಾ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕು. ಫಲಿತಾಂಶ ಸುಧಾರಣೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಕ್ರಮವಹಿಸಬೇಕು. ಕೇಂದ್ರ ಪುರಾತತ...
Click here to read full article from source
To read the full article or to get the complete feed from this publication, please
Contact Us.