ಭಾರತ, ಮಾರ್ಚ್ 23 -- ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಎತ್ತರದ ಬೆಟ್ಟಗಳಲ್ಲಿ ಕಾರಿಂಜ ಬೆಟ್ಟ ಕೂಡ ಒಂದು. ಕರ್ನಾಟಕದ ಸ್ಪೈಡರ್ ಮ್ಯಾನ್ ಎಂದೇ ಕರೆಯಲ್ಪಡುವ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಅವರು ಭಾನುವಾರ ಬೆಳಗ್ಗೆ ಈ ಬೆಟ್ಟವನ್ನು ಏರಿ ಗಮನ ಸೆಳೆದರು.

ಕೋತಿರಾಜ್ ಅವರು ಪ್ರಥಮ ಬಾರಿಗೆ ದ.ಕ. ಜಿಲ್ಲೆಯ ಕಾರಿಂಜ ಬೆಟ್ಟವನ್ನೇರುವ ತನ್ನ ಸಾಹಸದ ಪ್ರದರ್ಶನ ನೀಡಿದ್ದು, ನೂರಾರು ಕುತೂಹಲಿಗರು ಇದನ್ನು ಕಣ್ಣಾರೆ ಕಂಡರು.

ಕರ್ನಾಟಕದ ಸ್ಪೈಡರ್ ಮ್ಯಾನ್ ಎಂದೇ ಗುರುತಿಸಲ್ಪಡುವ ಜ್ಯೋತಿರಾಜ್ ನಿಗದಿಪಡಿಸಿದಂತೆ ಬೆಳಗ್ಗೆ 10 ಗಂಟೆಗೆ ಪುರಾಣ ಪ್ರಸಿದ್ಧ ಕಾರಿಂಜೇಶ್ವರನ ಬೆಟ್ಟದ ಮೇಲೆ ಹತ್ತಲು ಆರಂಭಿಸಿದರು. ಸುಡುವ ಶಾಖದಲ್ಲೂ, ಕೇವಲ ಅರ್ಧ ತಾಸಿಗಿಂತಲೂ ಮೊದಲೇ ಈಶ್ವರನ ದೇವಾಲಯದ ಮುಂದೆ ಬಂದು ದೇವರಿಗೆ ನಮಸ್ಕರಿಸಿದ್ದಾರೆ. ನೋಡ ನೋಡುತ್ತಿದ್ದಂತೆ ಬೆಟ್ಟದ ಮೇಲೆ ಏರಿಯೇ ಬಿಟ್ಟ ಜ್ಯೋತಿರಾಜ್ ಸಾಧನೆ ಮೈಜುಮ್ಮೆನಿಸುವಂತಿತ್ತು. ಸುಡು ಬಿಸಿಲಿಗೆ ಆತ ಬೆಟ್ಟವನ್ನು ಏರುವ ದೃಶ್ಯ ಕೆಲವರ ಕಣ್ಣುಗಳನ್ನು ಒದ್ದೆಯಾಗಿಸಿತು.

ಬಿಸಿಲಿನ‌ ತ...