Bengaluru, ಏಪ್ರಿಲ್ 15 -- Bengaluru Airport: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೋ ಟರ್ಮಿನಲ್‌ನಲ್ಲಿ ಸರಕು ನಿರ್ವಹಣೆಯನ್ನು ಇನ್ನಷ್ಟು ಸುಗಮಗೊಳಿಸಲು ಶೆಲ್ ಮೊಬಿಲಿಟಿ ಇಂಡಿಯಾ ಸಹಭಾಗಿತ್ವದಲ್ಲಿ "ಸುಧಾರಿತ ಟ್ರಕ್ ನಿರ್ವಹಣಾ ವ್ಯವಸ್ಥೆ" (Advanced Truck Management System)ಯನ್ನು ಬಿಐಎಎಲ್‌ ಜಾರಿಗೊಳಿಸಿದೆ.

ಸರಕು ಸಾಮರ್ಥ್ಯವನ್ನು ಹೆಚ್ಚಿಸಿರುವ ಕಾರಣ, ವಿಮಾನ ನಿಲ್ದಾಣದಲ್ಲಿ ಟ್ರಕ್ ಸಂಚಾರದಲ್ಲಿ ಕೂಡ ಹೆಚ್ಚಳವಾಗಬೇಕಾದ್ದು ಅನಿವಾರ್ಯವಾಗಿದೆ. ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು, ಶೆಲ್ ಮೊಬಿಲಿಟಿ (Shell mobility) ಯೊಂದಿಗೆ ಬೆಂಗಳೂರು ಕಾರ್ಗೋ ವಿಮಾನ ನಿಲ್ದಾಣದಲ್ಲಿ ವಿಮಾನ ನಿಲ್ದಾಣ ಟ್ರಕ್ ನಿರ್ವಹಣಾ ಸೌಲಭ್ಯವನ್ನು (ಎಟಿಎಂಎಫ್) ಅಭಿವೃದ್ಧಿಪಡಿಸಿದೆ. ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಈ ಸೌಲಭ್ಯವು ತಡೆರಹಿತ ಸರಕು ಸಾಗಣೆಗೆ ಸಹಕಾರಿಯಾಗಿದೆ. ಲಾರಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಜೊತೆಗೆ, ದಕ್ಷತೆಯನ್ನು ಹೆಚ್ಚಿಸುತ್ತದೆ, ಭಾರತದ ಪ್ರಧಾನ ಸರಕು ಕೇಂದ್ರವಾ...