ಭಾರತ, ಮಾರ್ಚ್ 20 -- ಬಿಗ್‌ ಬಾಸ್‌ 10ರಲ್ಲಿ ಸ್ಪರ್ಧಿಯಾಗಿದ್ದ ಇಶಾನಿ ತಮ್ಮ ಸಮ್ಮರ್ ಟ್ರಿಪ್‌ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಹಿಂದೆಂದಿಗಿಂತಲೂ ಈ ಬಾರಿ ಇನ್ನಷ್ಟು ಬೋಲ್ಡ್‌ ಆಗಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸುತ್ತಲೂ ಸಮುದ್ರ, ಬಿಸಿಲಿನ ಝಳ ಹಾಗೂ ಸುಂದರ ವಾತಾವರಣ ಇರುವ ಜಾಗದಲ್ಲಿ ಫೋಟೋಸ್‌ ತೆಗೆಸಿಕೊಂಡಿದ್ದಾರೆ.

ಸಮ್ಮರ್ ಥಿಂಗ್ಸ್‌ ಎಂಬ ಕ್ಯಾಪ್ಶನ್ ಅದರೊಟ್ಟಿಗೆ ನನಗೆ ಯಾರ ಅನುಮತಿಯೂ ಬೇಕಾಗಿಲ್ಲ ಎಂಬ ಸಾಲನ್ನು ಟ್ಯಾಗ್‌ಲೈನ್ ಆಗಿ ಬಳಸಿದ್ದಾರೆ.

ಇಶಾನಿ ಬಿಗ್‌ ಬಾಸ್‌ ಮನೆಯಲ್ಲಿ ಹೆಚ್ಚು ದಿನ ಉಳಿಯದಿದ್ದರೂ ತಮ್ಮ ಮಾತು ಹಾಗೂ ಕೃತಿಯಿಂದ ಜನಪ್ರಿಯರಾಗಿದ್ದಾರೆ.

ಇಶಾನಿ ಹಂಚಿಕೊಂಡ ಫೋಟೋಗಳನ್ನು ನೋಡಿ ಕೆಲವರು ಲೈಕ್ ಮಾಡಿದರೆ, ಇನ್ನಷ್ಟು ಜನ ಕಾಮೆಂಟ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇಶಾನಿ ಈ ಎಲ್ಲ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Published by HT Digital Content Services with permission from HT Kannada....