ಭಾರತ, ಮಾರ್ಚ್ 11 -- ಜ್ಯೋತಿಷ್ಯಶಾಸ್ತ್ರದ ಅನುಸಾರ ಶುಕ್ರನನ್ನು ಶುಭಗ್ರಹವೆಂದು ಕರೆಯಲಾಗುತ್ತದೆ. ಹಣಕಾಸಿನ ವಿಚಾರಗಳಿಗೆ ಶುಕ್ರನನ್ನು ಪರಿಗಣಿಸಿದರೂ ದೈಹಿಕ ಸೌಂದರ್ಯಕ್ಕೆ ಶುಕ್ರನು ಮೂಲನಾಗುತ್ತಾನೆ. ಮಾನಸಿಕ ಸೌಖ್ಯಕ್ಕೂ ಶುಕ್ರನು ಕಾರಣನಾಗುತ್ತಾನೆ. ಶುಕ್ರನ ಜೊತೆಯಲ್ಲಿ ಚಂದ್ರ ಅಥವಾ ಗುರುಗ್ರಗವು ಸ್ಥಿತರಾಗಿದ್ದಲ್ಲಿ ಮನದಲ್ಲಿ ಧನಾತ್ಮಕ ಚಿಂತನೆಗಳು ಇರುತ್ತವೆ. ಕೇವಲ ಯುತಿಯನ್ನಷ್ಟೇ ಅಲ್ಲದೆ ಪರಸ್ಪರ ದೃಷ್ಟಿಯೂ ಮುಖ್ಯವಾಗುತ್ತದೆ. ಶುಕ್ರನು ಸುಖ-ಸಮೃದ್ಧಿಯ ಜೀವನಕ್ಕೆ ಕಾರಣನಾಗುತ್ತಾನೆ. ಶುಕ್ರನಿಂದ ಪ್ರೀತಿ, ವೈವಾಹಿಕ ಜೀವನ, ಮದುವೆ, ಜೀವನ ಸಂಗಾತಿ, ಕುಟುಂಬದಲ್ಲಿನ ಹೊಂದಾಣಿಕೆ ಮತ್ತು ಸಂತಸದ ವಾತಾವರಣವನ್ನೂ ಪಡೆಯಬಹುದಾಗಿದೆ . ಸುಂದರವಾದ ವಾಸಸ್ಥಳವನ್ನೂ ಸಹ ಶುಕ್ರನಿಂದ ತಿಳಿಯಬಹುದು. ಶುಕ್ರಗ್ರಹವನ್ನು ಶ್ರೀಲಕ್ಷ್ಮಿ ಅನ್ನಪೂರ್ಣೇಶ್ವರಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಕುಂಡಲಿಯಲ್ಲಿನ ಶುಕ್ರನ ಸ್ಥಿತಿಗತಿ ಮತ್ತು ಶುಕ್ರನ ಮೇಲೆ ಪ್ರಭಾವ ಬೀರುವ ಗ್ರಹಗಳನ್ನು ಆಧರಿಸಿ ಶುಕ್ರಯಂತ್ರವನ್ನು ಧರಿಸಬೇ...