Bengaluru, ಫೆಬ್ರವರಿ 7 -- Thandel Movie Review: ಸಾಯಿ ಪಲ್ಲವಿ ಮತ್ತು ನಾಗಚೈತನ್ಯ ಸಿನಿಮಾದಲ್ಲಿದ್ದಾರೆ ಎಂದರೆ ಅಲ್ಲೊಂದು ಮಧುರ ಪ್ರೇಮಕಾವ್ಯ ಇರಲೇಬೇಕಲ್ಲವೇ? ತೆಲುಗಿನ ತಾಂಡೇಲ್‌ ಚಿತ್ರದಲ್ಲಿಯೂ ಆ ಎಳೆಯನ್ನೇ ನೋಡುಗನಿಗೆ ಮಗದಷ್ಟು ಹತ್ತಿರ ಎನಿಸುವ ಪರಿಭಾಷೆಯಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಚಂದೂ ಮೊಂಡೆಟಿ. ನೈಜ ಘಟನೆಗಳ ಜತೆಗೆ ಸಮುದ್ರದಾಳದ ಕಥೆಯನ್ನು ಹೆಕ್ಕಿ ತಂದಿದ್ದಾರವರು. ಅವರ ಈ "ಕಡಲಿನ" ಪ್ರಯತ್ನ ಯಶಸ್ವಿಯಾಗಿ ದಡ ಸೇರಿದೆ. ಹಾಗಾದರೆ ಏನಿದು ತಾಂಡೇಲ್?‌ ಕಥೆ ಹೇಗಿದೆ? ಇಲ್ಲಿದೆ ಸಿನಿಮಾ ವಿಮರ್ಶೆ, ಓದಿ.

ರಾಜ (ನಾಗ ಚೈತನ್ಯ) ಉತ್ತರಾಂಧ್ರದ ಮಚ್ಚಲೇಶಂ ಎಂಬ ತೀರ ಪ್ರದೇಶದಲ್ಲಿನ ಸಾಮಾನ್ಯ ಯುವಕ. ಆತನಿಗೆ ಸತ್ಯಳ (ಸಾಯಿ ಪಲ್ಲವಿ) ಮೇಲೆ ವಿಶಾಲ ಸಮುದ್ರದಷ್ಟೇ ಪ್ರೀತಿ. ಮೀನುಗಾರಿಕೆಯ ಈ ಹುಡುಗ ವರ್ಷದ 9 ತಿಂಗಳು ಸಮುದ್ರದಲ್ಲಿ ಕಾಲ ಕಳೆದರೆ, ಇನ್ನು ಮೂರು ತಿಂಗಳು ನೆಚ್ಚಿನ ಹುಡುಗಿ ಮತ್ತು ಮನೆಯವರೊಂದಿಗೆ ವಾಸ. ಹೀಗೆ ಸಾಗುವ ಕಥೆ, ಮೀನುಗಾರಿಕೆಗೆಂದು ಸಮುದ್ರಕ್ಕೆ ಇಳಿದಾಗ, ಪಾಕಿಸ್ತಾನದ ಸಮುದ್ರ...