ಭಾರತ, ಫೆಬ್ರವರಿ 24 -- ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರಿಕ್ಷೆ ಆರಂಭಕ್ಕೆ ಇನ್ನು ಒಂದು ತಿಂಗಳಿಗಿಂತ ಕಡಿಮೆ ದಿನಗಳು ಬಾಕಿ ಉಳಿದಿವೆ. ಹಾಲ್‌ಟಿಕೆಟ್‌ಗಳನ್ನು ಕರ್ನಾಟಕ ಶಾಲಾಪರೀಕ್ಷಾ ಮತ್ತು ಮೌಲ್ಯಾಂಕನ ಮಂಡಳಿ ಶೀಘ್ರವೇ ವಿತರಿಸಲಿದೆ. ಹತ್ತನೇ ತರಗತಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿರುವ ವಿದ್ಯಾರ್ಥಿಗಳು ಮಂಡಳಿಯ ಅಧಿಕೃತ ವೆಬ್‌ಸೈಟ್‌ ಗಮನಿಸುತ್ತಿರುವಂತೆ ಮಂಡಳಿ ಸಲಹೆ ನೀಡಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾರ್ಚ್‌ 21ರಿಂದ ರಾಜ್ಯದಲ್ಲಿ ಆರಂಭವಾಗಲಿದ್ದು, ಮಾರ್ಚ್‌ 15ರ ನಂತರ ಹಾಲ್‌ ಟಿಕೆಟ್‌ಗಳನ್ನು ವಿತರಿಸಲಾಗುತ್ತದೆ.

ಹಾಲ್‌ ಟಿಕೆಟ್‌ ಇಲ್ಲದೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳನ್ನು ಪ್ರವೇಶಿಸುವಂತಿಲ್ಲ. ಅಲ್ಲದೆ ಪರೀಕ್ಷೆ ಬರೆಯಲು ಅವಕಾಶವೂ ಇರುವುದಿಲ್ಲ. ವೆಬ್‌ಸೈಟ್‌ ಮೂಲಕ ವಿದ್ಯಾರ್ಥಿಗಳು ತಮ್ಮ ಹಾಲ್‌ಟಿಕೆಟ್‌ಗಳನ್ನು ಸುಲಭವಾಗಿ ಡೌನ್‌ ಲೋಡ್‌ ಮಾಡಿಕೊಳ್ಳಬಹುದಾಗಿದೆ. ಅಲ್ಲದೆ ಆಯಾ ಶಾಲೆಗಳಲ್ಲಿಯೂ ಹಾಲ್‌ ಟಿಕೆಟ್‌ ಗಳನ್ನು ವಿತರಿಸಲಾಗುತ್ತದೆ. ಇದಕ್ಕಾಗಿ ಮಂಡಳಿಯ ಅಧಿಕೃತ ವೆಬ್‌ಸೈಟ್ kseab.karnat...