ಭಾರತ, ಏಪ್ರಿಲ್ 1 -- Shravani Subramanya Kannada Serial: ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮಾರ್ಚ್ 31ರ ಸಂಚಿಕೆಯಲ್ಲಿ ಶ್ರಾವಣಿ ಹಾಗೂ ಸುಬ್ಬುವನ್ನು ಆದರದಿಂದ ಬರ ಮಾಡಿಕೊಳ್ಳುತ್ತಾರೆ ಲಲಿತಾದೇವಿ ಹಾಗೂ ವಂದನಾ. ಮಗಳ ಮೇಲೆ ಬೆಟ್ಟದಷ್ಟು ಕೋಪ ಇದ್ದರೂ, ಅತ್ತೆಗಾಗಿ ಎಲ್ಲವನ್ನೂ ಸಹಿಸಿಕೊಂಡು ಮಗಳನ್ನು ಆದರಿಸುತ್ತಾರೆ ವೀರೇಂದ್ರ. ಮನೆಯೊಳಗೆ ಬರುವ ಶ್ರಾವಣಿಗೆ ಅಲ್ಲಿ ಶ್ರೀವಲ್ಲಿ ಇರುವುದು ನೋಡಿ ಅನುಮಾನ ಮೂಡುತ್ತದೆ. ಆದರೆ ಏನನ್ನೂ ತೋರಿಸಿಕೊಳ್ಳದೇ ಬಂದು ಕುಳಿತುಕೊಳ್ಳುತ್ತಾರೆ ಶ್ರಾವಣಿ-ಸುಬ್ಬು

ಬಟ್ಟೆ ಒಗೆದು ಒಣಗಿಸುವಾಗ ಶ್ರಾವಣಿ ಸೀರೆ ನೆಲಕ್ಕೆ ಬೀಳುತ್ತದೆ. ಅದನ್ನು ನೋಡಿ ವಿಶಾಲಾಕ್ಷಿ ಗಾಬರಿಯಲ್ಲಿ ತೊಳೆದುಕೊಂಡು ಬರೋಣ ಎಂದು ಹೋಗುತ್ತಿರುವಾಗ ಪದ್ಮನಾಭ ಎದುರು ಬರುತ್ತಾರೆ. ಅವರನ್ನು ನೋಡಿ ನಾಟಕ ಮಾಡುವ ವಿಶಾಲಾಕ್ಷಿಯನ್ನು ಛೇಡಿಸುತ್ತಾರೆ ಪದ್ಮನಾಭ. ಅಲ್ಲದೇ 'ಎದೆಯಲ್ಲಿ ಬಚ್ಚಿಟ್ಟುಕೊಂಡಿರುವ ಪ್ರೀತಿಯನ್ನು ನೀನು ಯಾಕೆ ತೋರಿಸುತ್ತಿಲ್ಲ, ನಿನಗೆ ಶ್ರಾವಣಿಯಮ್ಮನ ಮೇಲೆ ಬೆಟ್ಟದ್ದಷ್ಟು ಪ್ರೀತಿ ಇದೆ ಎನ್ನ...