Bengaluru, ಏಪ್ರಿಲ್ 8 -- ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ, ಜೀವನಶೈಲಿಯಿಂದಾಗಿ ಬಹುತೇಕ ಮಂದಿ ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದೇಹಕ್ಕೆ ಅವಶ್ಯವಿರುವ ಸಮರ್ಪಕ ನಿದ್ರೆ ಸಾಧ್ಯವಾಗಬೇಕಾದರೆ, ರಾತ್ರಿ ಬೇಗ ಮಲಗಲೇಬೇಕು. ರಾತ್ರಿ ಬೇಗ ಮಲಗುವ ಅಭ್ಯಾಸವನ್ನು ರೂಢಿಸಿಕೊಳ್ಳಲು ಇಲ್ಲಿವೆ ಸಿಂಪಲ್ ಟಿಪ್ಸ್.

ನಿದ್ರಾಹೀನತೆಯು ರಾತ್ರಿ ಗಾಢವಾದ ನಿದ್ರೆಯನ್ನು ಪಡೆಯಲು ತಡೆಯೊಡ್ಡುತ್ತದೆ. ರಾತ್ರಿ ಅತಿಯಾಗಿ ಮೊಬೈಲ್, ಲ್ಯಾಪ್‍ಟಾಪ್ ಅಥವಾ ರಾತ್ರಿಯಿಡೀ ಕೆಲಸ ಮಾಡುವುದು, ಹೆಚ್ಚು ಕಾಲ ಓಡಾಟ ಇವೆಲ್ಲವೂ ನಿದ್ರೆಯ ಗುಣಮಟ್ಟವನ್ನು ಕಡಿಮೆಗೊಳಿಸುವ ಕಾರಣಗಳು. ಸಮರ್ಪಕವಾಗಿ ನಿದ್ರೆ ಮಾಡಬೇಕೆಂದರೆ ಬೇಗನೆ ಮಲಗುವುದೇ ಸೂಕ್ತ ಪರಿಹಾರ ಎನ್ನಬಹುದು.

ಸರಿಯಾದ ಸಮಯಕ್ಕೆ ಮಲಗುವುದು ಹಾಗೂ ಸಾಕಷ್ಟು ಕಾಲ ನಿದ್ರೆ ಮಾಡುವುದು ಉತ್ತಮ ಮಾನಸಿಕ ಸ್ಥಿತಿಗೂ ಸಹಕಾರಿ. ಹಾಗೆಂದು ರಾತ್ರಿ 8 ಗಂಟೆಯೊಳಗೆ ಮಲಗುವುದು ಉತ್ತಮವಲ್ಲದಿದ್ದರೂ, ರಾತ್ರಿ 12 ರವರೆಗೆ ಮಲಗದೆ ಕಾಲಹರಣ ಮಾಡುವುದು ಒಳ್ಳೆಯದಲ್ಲ. ಬೇಗ ಮಲಗುವುದು ಹೇಗೆ ಎನ್ನುವ ಸೂ...