Psycho horror stories,kannada new books,psychology stories in kannada,Book Release,ಹೊಸ ಕನ್ನಡ ಪುಸ್ತಕಗಳು,ಕನ್ನಡ ಕಾದಂಬರಿಗಳು,ಕನ್ನಡ ಸಣ್ಣ ಕಥೆಗಳು,ಸೈಕೋ ಹಾರರ್‌ ಕಥೆಗಳು,ಮನಸ್ಸಿಗೊಂದು ಕೈಗನ್ನಡಿ,ವರ್ಣತಂತು, ಫೆಬ್ರವರಿ 3 -- ಬೆಂಗಳೂರು: ಸಮನ್ವಿತ ಪ್ರಕಾಶನದಡಿ ಬೆಂಗಳೂರಿನ ಉದಯಬಾನು ಕಲಾ ಸಂಘದಲ್ಲಿ ಒಟ್ಟು ನಾಲ್ವರು ಬರಹಗಾರರ ಐದು ಪುಸ್ತಕಗಳು ಭಾನುವಾರ (ಫೆ 2) ಬಿಡುಗಡೆಯಾದವು. 'ಹಿಂದೂಸ್ತಾನ್ ಟೈಮ್ಸ್‌ ಕನ್ನಡ' ಜಾಲತಾಣದ ಅಂಕಣಕಾರ್ತಿಯೂ ಆಗಿರುವ ಮನಃಶಾಸ್ತ್ರಜ್ಞೆ ಡಾ ರೂಪಾ ರಾವ್‌ ಅವರ 'ಸೈಕೋ ಹಾರರ್‌ ಕಥೆಗಳು', 'ಮನಸ್ಸಿಗೊಂದು ಕೈಗನ್ನಡಿ' ಪುಸ್ತಕಗಳು ಸಹ ಇದರಲ್ಲಿ ಸೇರಿವೆ. ಎಸ್‌ಎಸ್‌ ಸಿಂಹ ಅವರ 'ಕನ್ನಡಿ ಸುಳ್ಳು ಹೇಳುವುದಿಲ್ಲ ಮತ್ತು ಇತರೆ ಕಥೆಗಳು', ರಮ್ಯ ಎಸ್‌. ಅವರ 'ವರ್ಣತಂತು', ಪ್ರಶಾಂತ್‌ ಶ್ರೀಕಂಠಯ್ಯ ಅವರ "ದುಶ್ಯಾಸನ ಬೇಕಾಗಿದ್ದಾನೆ ಮತ್ತು ಇತರೆ ಕಥೆಗಳು' ಕೃತಿಗಳನ್ನು ಸಹ ಇದೇ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಲೇಖಕಿ ಹಾಗೂ ಆಪ್ತ ಸಮಾಲೋಚಕಿ‌ ಶಾಂತಾ ನ...