ಭಾರತ, ಮಾರ್ಚ್ 28 -- Diabetes: ಜಗತ್ತಿನಲ್ಲಿ ಅತಿ ವೇಗವಾಗಿ ಹರಡುತ್ತಿರುವ ಜೀವನಶೈಲಿಗೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಮಧುಮೇಹಕ್ಕೆ ಅಗ್ರಸ್ಥಾನವಿದೆ. ಮಧುಮೇಹಿಗಳ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲೇ ನಂಬರ್ ಒನ್ ಸ್ಥಾನದಲ್ಲಿದೆ. ಆ ಕಾರಣಕ್ಕೆ ಭಾರತವು ಮಧುಮೇಹಿಗಳ ರಾಜಧಾನಿ ಎಂಬ ಕುಖ್ಯಾತಿಗೂ ಪಾತ್ರವಾಗಿದೆ. ಮಧುಮೇಹ ಎಂದಿಗೂ ಗುಣಪಡಿಸಲಾಗದ, ಆದರೆ ನಿಯಂತ್ರಿಸಲು ಸಾಧ್ಯವಿರುವ ಕಾಯಿಲೆಯಾಗಿದೆ. ಹಾಗಾದರೆ ಡಯಾಬಿಟಿಸ್ ಅಥವಾ ಮಧುಮೇಹ ಎಂದರೇನು? ಈ ಕಾಯಿಲೆ ಬರಲು ಕಾರಣವೇನು? ಮಧುಮೇಹದ ಆರಂಭಿಕ ಲಕ್ಷಣಗಳೇನು? ಇದರ ನಿಯಂತ್ರಣ ಹೇಗೆ ಎನ್ನುವ ಸಮಗ್ರ ವಿವರ ಇಲ್ಲಿದೆ.

ಮಧುಮೇಹ ರಕ್ತದಲ್ಲಿನ ಗ್ಲೂಕೋಸ್‌ ಮಟ್ಟ ಏರಿಕೆಯಾದಾಗ ಉಂಟಾಗುವ ಕಾಯಿಲೆ. ಇದನ್ನು ಸಕ್ಕರೆ ಕಾಯಿಲೆ ಎಂದೂ ಕೂಡ ಕರೆಯುತ್ತಾರೆ. ಗ್ಲೂಕೋಸ್‌ ನಮ್ಮ ದೇಹದ ಪ್ರಮುಖ ಶಕ್ತಿಯ ಮೂಲವಾಗಿದೆ. ಇದು ದೇಹದಲ್ಲಿ ಉತ್ಪತ್ತಿಯಾಗುತ್ತದೆ, ಜೊತೆಗೆ ನಾವು ಸೇವಿಸುವ ಆಹಾರಗಳಿಂದಲೂ ದೇಹದಲ್ಲಿ ಗ್ಲೂಕೋಸ್ ಸಂಚಯವಾಗುತ್ತದೆ.

ಇನ್ಸುಲಿನ್ ಎಂಬುದು ಮೇದೋಜ್ಜೀರಕ ಗ್ರಂಥಿಯಿಂದ ಉತ್ಪತ್ತ...