Bengaluru, ಮಾರ್ಚ್ 2 -- Agnyathavasi Movie: ಸ್ಯಾಂಡಲ್‌ವುಡ್‌ನಲ್ಲಿ ಹೊಸ ಅಲೆಯ, ಹೊಸ ಘಮದ ಸಿನಿಮಾಗಳನ್ನು ನೀಡುತ್ತ ಬಂದಿರುವ ನಿರ್ದೇಶಕ ಹಾಗೂ ನಿರ್ಮಾಪಕ ಹೇಮಂತ್‌ ಎಂ ರಾವ್‌, ಇದೀಗ ತಮ್ಮ ಮುಂದಿನ ಸಿನಿಮಾ "ಅಜ್ಞಾತವಾಸಿ"ಯ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. ಅಂದಹಾಗೆ, ಇದು ಹೇಮಂತ್‌ ರಾಮ್‌ ನಿರ್ದೇಶನದ ಸಿನಿಮಾ ಅಲ್ಲ. ಬದಲಿಗೆ ಅವರ ನಿರ್ಮಾಣದ ಸಿನಿಮಾ.

ಕವಲುದಾರಿ, ಗೋಧಿಬಣ್ಣ ಸಾಧಾರಣ ಮೈಕಟ್ಟು ಹಾಗೂ ಸಪ್ತ ಸಾಗರದಾಚೆ ಎಲ್ಲೋ ಸರಣಿ ಸಿನಿಮಾಗಳ ಸಾರಥಿ ಹೇಮಂತ್ ರಾವ್ ನಿರ್ಮಾಣದ ಬಹುನಿರೀಕ್ಷಿತ ಚಿತ್ರ ಅಜ್ಞಾತವಾಸಿ. 'ಗುಳ್ಟು' ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ಆಕ್ಷನ್ ಕಟ್ ಹೇಳಿರುವ ಅಜ್ಞಾತವಾಸಿ ಟೀಸರ್ ಈಗಾಗಲೇ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ. ಇದೀಗ ಚಿತ್ರತಂಡ ಸಿನಿಮಾವನ್ನು ಬೆಳ್ಳಿತೆರೆಗೆ ತರಲು ಸಜ್ಜಾಗಿದೆ. ಅದರಂತೆ ಅಜ್ಞಾತವಾಸಿ ಸಿನಿಮಾದ ಬಿಡುಗಡೆಗೆ ದಿನಾಂಕ ನಿಗದಿ ಮಾಡಲಾಗಿದೆ. ಏಪ್ರಿಲ್ 11ಕ್ಕೆ ರಾಜ್ಯಾದ್ಯಂತ ಚಿತ್ರ ರಿಲೀಸ್‌ ಆಗಲಿದೆ.

ರಂಗಾಯಣ ರಘು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರ...