Bengaluru, ಏಪ್ರಿಲ್ 22 -- ಐಪಿಎಲ್ 2025ರ 42ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತು ಮುಂಬೈ ಇಂಡಿಯನ್ಸ್ (MI) ತಂಡಗಳು ಮುಖಾಮುಖಿಯಾಗಲಿವೆ. ನಾಳೆ (ಏ.23ರ ಬುಧವಾರ) ನಡೆಯಲಿರುವ ಪಂದ್ಯವು ಎಸ್‌ಆರ್‌ಎಚ್‌ ತವರು ಮೈದಾನ ಹೈದರಾಬಾದ್‌ನ ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈಗಾಗಲೇ ಉಭಯ ತಂಡಗಳು ಪ್ರಸಕ್ತ ಆವೃತ್ತಿಯಲ್ಲಿ ಒಂದು ಬಾರಿ ಮುಖಾಮುಖಿಯಾಗಿವೆ. ವಾಂಖೆಡೆಯಲ್ಲಿ ಅನುಭವಿಸಿದ ಸೋಲಿಗೆ, ಇದೀಗ ತಮ್ಮ ತವರಿನಲ್ಲಿ ಸೇಡು ತೀರಿಸಿಕೊಳ್ಳಲು ಪ್ಯಾಟ್‌ ಕಮಿನ್ಸ್ ಬಳಗ ಎದುರು ನೋಡುತ್ತದೆ. ಮುಂಬೈ ತಂಡವು ಆಡಿದ ಕೊನೆಯ ಮೂರು ಪಂದ್ಯಗಳಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದರೆ, ಎಸ್‌ಆರ್‌ಎಚ್‌ ತಂಡ ಇಡೀ ಋತುವಿನಲ್ಲಿ ಕೇವಲ 2ರಲ್ಲಿ ಮಾತ್ರ ಗೆದ್ದು ಕಳಪೆ ಫಾರ್ಮ್‌ನಲ್ಲಿದೆ. ಮಹತ್ವದ ಪಂದ್ಯಕ್ಕೆ ಸಂಬಂಧಿಸಿದಂತೆ 10 ಪ್ರಮುಖ ಅಂಶಗಳನ್ನು‌ ನೋಡೋಣ.

ಇದನ್ನೂ ಓದಿ | ಹೋರಾಟವೇ ತೋರದೆ ಶರಣಾದ ಹಾಲಿ ಚಾಂಪಿಯನ್; ಕೆಕೆಆರ್ ವಿರುದ್ಧ ಗುಜರಾತ್​​ಗೆ 39 ರನ್ನುಗಳ ಭರ್ಜರಿ ಗೆಲುವು

Published by HT Digit...