Bengaluru, ಏಪ್ರಿಲ್ 10 -- ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಅವರು ಇತ್ತೀಚೆಗೆ ಸ್ಟಾರ್ಟಪ್‌ ಶೃಂಗದಲ್ಲಿ ಭಾರತ ಮತ್ತು ಚೀನಾದ ನವೋದ್ಯಮಗಳ ಪಟ್ಟಿ ಮುಂದಿಟ್ಟು ಹೋಲಿಕೆ ಮಾಡಿದ ವಿಚಾರ ವ್ಯಾಪಕ ಚರ್ಚೆಗೆ ಒಳಗಾಗಿದೆ. ಭಾರತದ ನವೋದ್ಯಮಗಳು, ಆಹಾರ ಮತ್ತು ಗ್ರಾಹಕ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವುದಕ್ಕೆ ಸೀಮಿತವಾಗಿದೆ ಎಂಬ ಅಂಶವನ್ನು ಹೈಲೈಟ್ ಮಾಡಿ ಮಾತನಾಡಿದ್ದರು. ಚೀನಾ ಹಾಗಲ್ಲ, ಅಲ್ಲಿನ ನವೋದ್ಯಮಗಳು ಎಐ, ಇವಿಗೆ ಬೇಕಾದ ಬಿಡಿ ಭಾಗಗಳು ಹೀಗೆ ತಂತ್ರಜ್ಞಾನ ಸುಧಾರಣೆಗೆ ಕೆಲಸ ಮಾಡುತ್ತಿವೆ ಎಂದು ಹೇಳಿದ್ದರು. ಸಚಿವರ ಹೇಳಿಕೆ ವ್ಯಾಪಕವಾಗಿ ಟೀಕೆಗೆ ಒಳಗಾಗಿದೆ. ಈ ಪೈಕಿ ಲೇಖಕ ಮಧು ವೈಎನ್ ಅವರು ಕೂಡ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಅದಕ್ಕೂ ಮೊದಲು ಪಿಯೂಷ್ ಗೋಯೆಲ್ ಹೇಳಿದ್ದೇನು ಎಂಬ ವಿಡಿಯೋ ಗಮನಿಸೋಣ.

ಕಳೆದ ವಾರ ಪಿಯೂಷ್ ಗೋಯೆಲ್ ಒಂದು ಕಾಂಟ್ರೋವರ್ಸಿಯಾದ ಆದರೆ ಸತ್ಯವಾದ ಮಾತು ಹೇಳಿದ್ದರು. ನಮ್ಮ ದೇಶದಲ್ಲಿ ಸ್ಟಾರ್ಟಪ್ಪುಗಳೆಂದರೆ ಗ್ಲೂಟೆನ್ ಫ್ರೀ ಐಸ್ಕ್ರೀಮು, ಉದ್ಯೋಗ ಸೃಷ್ಟಿಯೆಂದರೆ ಡೆಲಿವರಿ ಬಾಯ್ಸ...