ಭಾರತ, ಮಾರ್ಚ್ 10 -- Actress Abhinaya Engaged: ಸ್ಯಾಂಡಲ್‌ವುಡ್‌ನಲ್ಲಿ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿದರೂ, ಕನ್ನಡಿಗರನ್ನು ಸೆಳೆದವರು ನಟಿ ಅಭಿನಯಾ. ಮಾತು ಬಾರದ, ಕಿವಿ ಕೇಳಿಸದ ವಿಶೇಷ ಪ್ರತಿಭೆಯಾಗಿರುವ ಅಭಿನಯಾ, ಕನ್ನಡದಲ್ಲಿ 2011ರಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರ ಜೊತೆಗೆ ಹುಡುಗರು ಸಿನಿಮಾದಲ್ಲಿ ನಟಿಸಿದ್ದರು. ಆ ಚಿತ್ರದಲ್ಲಿ ಅಪ್ಪು ತಂಗಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಸಿನಿಮಾ ಸೂಪರ್‌ ಹಿಟ್‌ ಸಹ ಆಗಿತ್ತು. ಇದೀಗ ಇದೇ ಬಹುಭಾಷಾ ನಟಿ, ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಸದ್ದಿಲ್ಲದೆ ಮನಮೆಚ್ಚಿದ ಹುಡುಗನ ಜತೆಗೆ ಉಂಗುರ ಬದಲಿಸಿಕೊಂಡು ನಿಶ್ಚಿತಾರ್ಥ ಮುಗಿಸಿಕೊಂಡಿದ್ದಾರೆ.

ನಟಿ ಅಭಿನಯ ಬಾಳಿನಲ್ಲಿ ಇದೀಗ ಹೊಸ ಬೆಳಕು ಮೂಡಿದೆ. ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ನಿಶ್ಚಿತಾರ್ಥದ ಫೋಟೋ ಹಂಚಿಕೊಂಡಿದ್ದಾರೆ. ಭಾವಿ ಪತಿಯ ಜೊತೆ ಸೇರಿ ಒಂದೇ ಗಂಟೆಯನ್ನು ಬಾರಿಸುವ ಫೋಟೋ ಹಂಚಿಕೊಂಡು, "ಘಂಟೆಗಳು ಮೊಳಗಲಿ ಮತ್ತು ಆಶೀರ್ವಾದಗಳು ಸುರಿಯಲಿ. ಇದು ಶಾಶ್ವತವಾಗಿ ಉಳಿಯುವ ಪ್ರಯಾಣದ ಆರಂಭ....