ಭಾರತ, ಮೇ 17 -- ಮೇ ತಿಂಗಳ ಎರಡನೇ ಭಾನುವಾರ ವಿಶ್ವದಾದ್ಯಂತ ʼಮದರ್ಸ್‌ ಡೇʼ ಆಚರಿಸಲಾಯಿತು. ತನ್ನೊಳಗೆ ಉದಯಿಸುವ ಮತ್ತೊಂದು ಜೀವಕ್ಕೆ ಜೀವ ನೀಡುವ ಶಕ್ತಿ ಇರುವ ಹೆಣ್ಣಿಗೆ ಮತ್ತು ಅವಳ ತ್ಯಾಗಕ್ಕೆ ನಮಿಸುವ ಉದ್ದೇಶದಿಂದ ವಿಶ್ವದಾದ್ಯಂತ ʼಮದರ್ಸ್‌ ಡೇʼಯನ್ನು ಆಚರಿಸಲಾಗುತ್ತದೆ. 'ಮಾತೃ ದೇವೋ ಭವ' ಎಂದು ತಾಯಿಯನ್ನು ದೇವರ ಸಮಾನವಾಗಿಸುವ ಹೇಳಿಕೆ ತೈತರೀಯ ಉಪನಿಷತ್ತಿನಲ್ಲಿ ಭಾರತದಲ್ಲಿ ನಮಗೆ ದೊರೆವಂತೆ, ಗ್ರೀಕರು ʼದೇವತೆಗಳ ತಾಯಿಯಾಗಿ 'ರಿಯಾ' ಎಂಬ ದೇವತೆಯನ್ನು ಪೂಜಿಸುತ್ತಾರೆ. ರೋಮನ್ನರು 'ಹಿಲರಿಯಾ' ಎಂಬ ಉತ್ಸವವನ್ನು ಆಚರಿಸುತ್ತಿದ್ದ ಬಗ್ಗೆ ಮಾಹಿತಿ ದೊರಕುತ್ತದೆ. ಈ ಆಧುನಿಕ ಯುಗದ ʼಮದರ್ಸ ಡೇ' ಯನ್ನು 'ಅನ್ನ ಜರ್ವಿಸ್' ಎನ್ನುವಾಕೆ ಮೊದಲ ಬಾರಿಗೆ ಪಶ್ಚಿಮ ವರ್ಜಿನೀಯಾ ಭಾಗದಲ್ಲಿ ತನ್ನ ತಾಯಿಗೆ ಮತ್ತು ಎಲ್ಲ ತಾಯಂದಿರು ತಮ್ಮ ಮಕ್ಕಳಿಗಾಗಿ ಮಾಡುವ ತ್ಯಾಗಕ್ಕೆ ಗೌರವ ಸೂಚಿಸುವ ಕಾರ್ಯಕ್ರಮವನ್ನು ಸಾರ್ವಜನಿಕವಾಗಿ ಆಚರಿಸಿದರು. ಈ ಆಚರಣೆಯ ಉದ್ದೇಶದಿಂದ ಪ್ರಭಾವಿತರಾದ ಅಮೆರಿಕದಲ್ಲಿ ಒಂದು ಕಾಲದಲ್ಲಿ ಅಧ್ಯಕ್ಷರಾಗಿದ್ದ ವ...