ಭಾರತ, ಫೆಬ್ರವರಿ 1 -- ಸಾಸಿವೆ ಎಣ್ಣೆಯನ್ನು ಅಡುಗೆ ಹಾಗೂ ದೇವರ ಪೂಜೆಗೆ ಬಳಸಲಾಗುತ್ತದೆ ಎಂಬ ವಿಚಾರ ನಿಮಗೆ ತಿಳಿದಿರಬಹುದು. ಆದರೆ ಇದರ ಪರಿಮಳ ಕೆಲವರಿಗೆ ಸಹ್ಯವಾಗುವುದಿಲ್ಲ. ಆದರೆ ಇದರ ಪ್ರಯೋಜನ ತಿಳಿದರೆ ಖಂಡಿತ ನೀವು ಬಳಸದೇ ಇರುವುದಿಲ್ಲ. ಸಾಸಿವೆ ಎಣ್ಣೆ ದೇಹದ ಅಂತರಿಕ ಅಂಗಗಳಿಗೆ ಮಾತ್ರವಲ್ಲ, ಬಾಹ್ಯ ಅಂಗಕ್ಕೂ ಪ್ರಯೋಜನಕಾರಿ. ಚರ್ಮದ ಅಂದ, ಆರೋಗ್ಯ ಹೆಚ್ಚಿಸಿಕೊಳ್ಳಲು ಇದಕ್ಕಿಂತ ಉತ್ತಮ ಆಯ್ಕೆ ಇನ್ನೊಂದಿಲ್ಲ.

ಸಾಸಿವೆ ಎಣ್ಣೆಯನ್ನು ಸಾಸಿವೆ ಬೀಜಗಳಿಂದ ಹೊರತೆಗೆಯಲಾಗುತ್ತದೆ. ಇದನ್ನು ಮುಖ್ಯವಾಗಿ ಭಾರತೀಯ ಮತ್ತು ದಕ್ಷಿಣ ಏಷ್ಯಾದ ಪಾಕಪದ್ಧತಿಗಳಲ್ಲಿ ಬಳಸಲಾಗುತ್ತದೆ. ಈ ಎಣ್ಣೆಯು ಬಲವಾದ ಸುವಾಸನೆ ಮತ್ತು ಹೆಚ್ಚಿನ ಹೊಗೆ ಬಿಂದುವನ್ನು ಹೊಂದಿರುತ್ತದೆ. ಅಡುಗೆಯಲ್ಲಿ ಮಾತ್ರವಲ್ಲದೆ, ಚರ್ಮದ ಆರೈಕೆಗೂ ಸಾಸಿವೆ ಎಣ್ಣೆ ಅತ್ಯುತ್ತಮ ಔಷಧವಾಗಿದೆ. ಇದು ಆಯುರ್ವೇದದಲ್ಲೂ ಸಾಬೀತಾಗಿದೆ. ಸಾಸಿವೆ ಎಣ್ಣೆಯು ಹಲವು ಚರ್ಮದ ಸಮಸ್ಯೆಗಳಿಗೆ ಪರಿಹಾರವಾಗಿದೆ.

ಸಾಸಿವೆ ಎಣ್ಣೆಯು ಚರ್ಮಕ್ಕೆ ಅಗತ್ಯವಾದ ಕೊಬ್ಬಿನಾಮ್ಲಗಳು, ಜೀವಸತ್ವಗಳ...