Bengaluru, ಮಾರ್ಚ್ 19 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಮಂಗಳವಾರ ಮಾರ್ಚ್ 18ರ ಸಂಚಿಕೆಯಲ್ಲಿ ಭಾಗ್ಯ ಬಗ್ಗೆ ತಾಂಡವ್ ಮನೆಗೆ ಬಂದು ಇಲ್ಲ ಸಲ್ಲದ ಆರೋಪ ಮಾಡಿದ್ದಾನೆ. ಮನೆಯ ಹೊರಗೆ ಕೂಗಾಡಿ ಗಲಾಟೆ ಎಬ್ಬಿಸಿದ್ದಾನೆ. ಹೀಗಾಗಿ ಅವನ ಮಾತಿನ ಬಗ್ಗೆ ಮನೆಯವರಿಗೆ ಸಂಶಯ ಬಂದಿದೆ. ಭಾಗ್ಯ ಮನೆಗೆ ಬರುತ್ತಲೇ, ಸುನಂದಾ ಬಾಗಿಲಿನಲ್ಲಿಯೇ ಅವಳನ್ನು ಸ್ವಾಗತಿಸುತ್ತಾಳೆ. ಬಾ ಭಾಗ್ಯ, ನಿನ್ನನ್ನೇ ಎದುರು ನೋಡುತ್ತಿದ್ದೆ ಎಂದು ಕರೆಯುತ್ತಾಳೆ. ಭಾಗ್ಯಗೆ ಅಮ್ಮನ ಮಾತು ಒಗಟಾಗಿ ಕಾಣಿಸುತ್ತದೆ. ಯಾಕೆ ಅಮ್ಮ, ಏನಾಯಿತು ಎಂದು ಭಾಗ್ಯ ಕೇಳುತ್ತಾಳೆ. ಆಗ ಸುನಂದಾ, ಯಾಕೆ ಹೀಗೆ ಮಾಡಿದೆ, ಯಾಕೆ ನಮ್ಮ ಮರ್ಯಾದೆ ತೆಗೆಯುತ್ತಿರುವೆ ಎಂದು ಪ್ರಶ್ನಿಸುತ್ತಾಳೆ.

ತಾಂಡವ್ ಬಂದು ಎಲ್ಲ ವಿಚಾರವನ್ನೂ ಹೇಳಿದ್ದಾನೆ. ಯಾಕೆ ನೀವು ನಮ್ಮ ಬಳಿ ಈ ಎಲ್ಲ ವಿಚಾರ ಮುಚ್ಚಿಟ್ಟೆ? ನಮ್ಮ ಬಳಿ ಹೇಳಬಹುದಿತ್ತು, ಆದರೂ ನೀನು ಬಾಯಿಬಿಡಲಿಲ್ಲ. ನೀನು ಹೋಗಿ ಅಂತಹ ಕೆಲಸ ಮಾಡಬೇಕಿರಲಿಲ್ಲ ಎಂದು ಮಗಳ ಮೇಲೆ ಆರೋಪ ಮತ್ತು ಬೈಗುಳ ಮಳೆ ಸುರಿಸುತ್ತಾಳೆ. ...