Bengaluru, ಜೂನ್ 11 -- ನಾವು ಆಚರಿಸುವ ಪೂಜೆ ಪುನಸ್ಕಾರದಲ್ಲಿ ಶ್ರೀ ಸತ್ಯನಾರಾಯಣ ಸ್ವಾಮಿ ಮತ್ತು ಶ್ರೀ ಅನಂತ ಪದ್ಮನಾಭ ಸ್ವಾಮಿಯ ಪೂಜೆಯು ಅತಿ ಮುಖ್ಯವಾಗುತ್ತದೆ. ಈ ಪೂಜೆಗಳಿಂದ ಮಾತ್ರ ನಾವು ಮಾಡುವ ಸಣ್ಣ ಪುಟ್ಟ ಲೋಪ ದೋಷಗಳಿಂದ ಪಾರಾಗಬಹುದು. ಕುಟುಂಬದ ಯಾವುದೇ ಮಂಗಳ ಕಾರ್ಯವಾದರೂ ಅದು ಪರಿ ಪೂರ್ಣವಾಗುವುದು ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆಯಿಂದ ಮಾತ್ರ. ಕಾರಣವೆಂದರೆ ಜೀವನದಲ್ಲಿ ಪ್ರತಿಯೊಬ್ಬರೂ ತಿಳಿದೊ ತಿಳಿಯದೆಯೋ ಸಾಮಾನ್ಯವಾಗಿ ಯಾವುದಾದರೊಂದು ತಪ್ಪನ್ನು ಮಾಡಿರುತ್ತಾರೆ. ಅದೇ ರೀತಿ ಕುಟುಂಬದಲ್ಲಿ ಆಚರಿಸುವ ಶುಭಕಾರ್ಯಗಳಲ್ಲಿ ಒಂದಿಲ್ಲೊಂದು ಲೋಪ ಉಂಟಾಗಿರುತ್ತದೆ. ಇದರಿಂದ ದೊರೆಯುವ ಅಶುಭ ಫಲಗಳಿಂದ ದೂರವಾಗಬೇಕೆಂದರೆ ಅದು ಶ್ರೀ ಸತ್ಯನಾರಾಯಣ ಪೂಜೆಯಿಂದ ಮಾತ್ರ ಸಾಧ್ಯ.

ಇಂತಹ ಲೋಪ ದೋಷಗಳನ್ನು ತೊರೆದು ಶುಭಫಲಗಳನ್ನು ನೀಡುವ ಶ್ರೀ ಸತ್ಯನಾರಾಯಣ ಸ್ವಾಮಿ ದೇವಸ್ಥಾನವು ಆಂಧ್ರಪ್ರದೇಶದಲ್ಲಿದೆ. ಈ ದೇವಾಲಯವು ಕಾಕಿನಾಡ ಜಿಲ್ಲೆಯ ಅನ್ನಾವರಂನಲ್ಲಿ ನೆಲೆಗೊಂಡಿದೆ. ಈ ದೇವಾಲಯವನ್ನು ಶ್ರೀ ವೀರ ವೆಂಕಟ ಸತ್ಯನಾರಾಯಣ ಸ್ವ...